More

    ಭಾರತ-ಚೀನಾ ಬಿಕ್ಕಟ್ಟು: ಕುತೂಹಲ ಮೂಡಿಸಿದ ಪ್ರಧಾನಿ ಮೋದಿಯವರ ನಡೆ…ಜೂ.19ರವರೆಗೆ ಕಾಯಬೇಕು

    ನವದೆಹಲಿ: ಭಾರತ-ಚೀನಾ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ. ಚೀನಾ ಸೈನಿಕರಿಂದ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇತ್ತೀಚೆಗೆ ಹಲವು ದಿನಗಳಿಂದಲೂ ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಕಲ್ಲು ತೂರಾಟ, ಹೊಡೆದಾಟದಲ್ಲಿ ತೊಡಗಿಕೊಂಡಿದ್ದರು.

    ಆದರೆ ಸೋಮವಾರ ಈ ಸಂಘರ್ಷ ಮುಂದುವರಿದು ಮತ್ತೊಂದು ಹಂತಕ್ಕೆ ತಲುಪಿದೆ. ಒಂದೇ ಒಂದು ಗುಂಡು ಹಾರದೆ, ಬರೀ ಕಲ್ಲು, ದೊಣ್ಣೆಗಳಲ್ಲೇ ಬಡಿದಾಡಿಕೊಂಡಿದ್ದಾರೆ. ನಮ್ಮ ದೇಶದ 20 ಯೋಧರು ಚೀನಿ ಸೈನಿಕರ ಹೊಡೆತದಿಂದ ಹುತಾತ್ಮರಾಗಿದ್ದಾರೆ. ಹಾಗೇ ಚೀನಾದ 43 ಸೈನಿಕರನ್ನು ಕೊಂದಿದ್ದಾಗಿ ಭಾರತೀಯ ಸೇನೆ ತಿಳಿಸಿದೆ.

    ಇದೀಗ ಎಲ್ಲರ ಚಿತ್ತ ಪ್ರಧಾನಿ ನರೇಂದ್ರ ಮೋದಿಯವರತ್ತ ನೆಟ್ಟಿದೆ. ಪಾಕ್​ ದಾಳಿ ಮಾಡಿದಾಗಲೆಲ್ಲ ಮುಲಾಜಿಲ್ಲದೆ ಪ್ರತೀಕಾರ ತೀರಿಸಿಕೊಂಡಿರುವ ಭಾರತೀಯ ಸೇನೆ ಮುಂದೇನು ಮಾಡಲಿದೆ? ಪ್ರಧಾನಿಯ ಮುಂದಿನ ನಡೆಯೇನು ಎಂಬ ಕುತೂಹಲ ಹುಟ್ಟಿದೆ. ಪ್ರತಿಪಕ್ಷಗಳಂತೂ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿವೆ. ಇದನ್ನೂ ಓದಿ:ಸುಶಾಂತ್ ಅಭಿಮಾನಿಗಳ ಕೋಪಾಗ್ನಿಗೆ ಸಲ್ಮಾನ್ ಖಾನ್​, ಕರಣ್​ ಪ್ರತಿಕೃತಿ ದಹನ ! 

    ಹೀಗಿರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂ.19ರಂದು (ಶುಕ್ರವಾರ) ಸಂಜೆ 5ಗಂಟೆಗೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಎಲ್ಲ ಪಕ್ಷಗಳ ಪ್ರಮುಖರೊಂದಿಗೆ ಮಾತನಾಡಲಿರುವ ಮೋದಿ, ಭಾರತ-ಚೀನಾ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸುಶಾಂತ್​ ಸಿಂಗ್​​ ಓರ್ವ ನಟ ಎಂಬುದೂ ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ಮತ್ತೊಂದು ಎಡವಟ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts