More

    ಬಂಡೀಪುರದಲ್ಲಿ ನಮೋ: ಸಾಮಾನ್ಯ ಬೊಲೆರೋ ವಾಹನದಲ್ಲಿ ಪ್ರಧಾನಿ ಮೋದಿ ಸಫಾರಿ

    ಚಾಮರಾಜನಗರ: ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಬಂಡೀಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಸುಮಾರು 2 ಗಂಟೆಗಳ ಕಾಲ ಸಫಾರಿ ನಡೆಸಲಿದ್ದಾರೆ.

    ಪ್ರಧಾನಿ ಮೋದಿ ಅವರ ಸಫಾರಿ ಆರಂಭವಾಗಿದ್ದು, ಸಾಮಾನ್ಯ ಬೊಲೆರೋ ವಾಹನದಲ್ಲಿ ಸಫಾರಿ ನಡೆಸುತ್ತಿದ್ದಾರೆ. ಸುಮಾರು 22 ಕಿ.ಮೀ ದೂರದ ಸಫಾರಿ ಇದಾಗಿದೆ. ಪ್ರಕೃತಿಯನ್ನೇ ಹೊದ್ದು ಮಲಗಿರುವ ದಟ್ಟಾರಣ್ಯದ ಸೌಂದರ್ಯದ ಜತೆಗೆ ವನ್ಯ ಮೃಗಗಳ ಕಲರವವನ್ನು ಪ್ರಧಾನಿ ಮೋದಿ ಅವರು ಕಣ್ತುಂಬಿಕೊಳ್ಳುತ್ತಿದ್ದಾರೆ. ಸಫಾರಿ ಸಮಯದಲ್ಲಿ ಪ್ರಧಾನಿ ಮೋದಿ ಕ್ಯಾಮಾ ಫ್ಲಾಜ್ ಡ್ರೆಸ್ ಧರಿಸಿದ್ದಾರೆ.

    ಬಂಡೀಪುರದ ಬೊಳು ಗುಡ್ಡ, ಮರಳ್ಳಾಲ ಕ್ಯಾಂಪ್, ಟೈಗರ್ ರೋಡ್, ಬಾರ್ಡರ್ ರೋಡ್​ನಲ್ಲಿ ಪ್ರಧಾನಿ ಮೋದಿ ಸಫಾರಿ ಸಾಗಲಿದೆ. ಮರಳ್ಳಾಲ ಕಳ್ಳಬೇಟೆ ಶಿಬಿರ ಬಳಿ ಟೀ ಕುಡಿಯುವ ಸಾಧ್ಯತೆ ಇದೆ. ಸಫಾರಿ ವಾಹನದ ಮೂಲಕ ಕೆಕ್ಕನಹಳ್ಳ ಚೆಕ್ ಪೋಸ್ಟ್​ ಆಗಮಿಸುವ ಪ್ರಧಾನಿ ಮೋದಿ, ನಂತರ ಸಫಾರಿ ವಾಹನದಿಂದ ಇಳಿದು ಕಾರಿನಲ್ಲಿ ಮಧುಮಲೈನತ್ತ ಪಯಣ ಬೆಳೆಸಲಿದ್ದಾರೆ.

    ಇದನ್ನೂ ಓದಿ: ಮೋಜಿನ ಈಜು ಜೀವಕ್ಕೆ ಕುತ್ತು ತಂದೀತು.. ಎಚ್ಚರ!: ಪ್ರತಿ ಬೇಸಿಗೆಯಲ್ಲಿ ನೂರಾರು ಜನ ನೀರುಪಾಲು, ಮಕ್ಕಳ ಮೇಲೆ ಪಾಲಕರಿಗಿರಲಿ ಹದ್ದಿನ ಕಣ್ಣು

    ಬೊಮ್ಮನ್​-ಬೆಳ್ಳಿ ದಂಪತಿ ಭೇಟಿ
    ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಆನೆ ಶಿಬಿರದಲ್ಲಿ ಆಸ್ಕರ್​ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಸನ್ಮಾನಿಸಲಿದ್ದಾರೆ. ಇದಾದ ನಂತರ ಅಧಿಕಾರಿಗಳೊಂದಿಗೆ 5 ರಿಂದ 10 ನಿಮಿಷ ಚರ್ಚೆ ಮಾಡಲಿದ್ದಾರೆ. ಬಳಿಕ ಮಸನಿಗುಡಿ ಸಮೀಪದ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹೊರಡಲಿರುವ ಪ್ರಧಾನಿ ಮೋದಿ, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಮೈಸೂರಿನಲ್ಲಿ ಕಾರ್ಯಕ್ರಮ
    ಸಫಾರಿ ಮುಗಿದ ಬಳಿಕ ಇಂದು ಬೆಳಗ್ಗೆ 10.30ಕ್ಕೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬಂಡೀಪುರದಲ್ಲಿ ಮೋದಿ ಸಫಾರಿ: ಹುಲಿ ರಕ್ಷಿತಾರಣ್ಯದಲ್ಲಿ ಪ್ರಧಾನಿ ಪ್ರವಾಸ; ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ

    ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..

    ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts