More

    ಪಶ್ಚಿಮ ಬಂಗಾಳದಲ್ಲಿ ಲಾಕ್​ಡೌನ್​ ಹೇಗಿದೆ? ದೀದಿಯ ವಿವರಣೆ ಕೇಳಿ ಪ್ರಧಾನಿ ಮೋದಿ ಫುಲ್​ ಖುಷ್​, ಧನ್ಯವಾದ ಹೇಳಿದ ಅಮಿತ್​ ಷಾ

    ಕೋಲ್ಕತ್ತ: ಕರೊನಾ ನಿಯಂತ್ರಣದ ಸಲುವಾಗಿ ಇಡೀ ದೇಶಾದ್ಯಂತ ಲಾಕ್​ಡೌನ್​ ಮಾಡಿ, ಸಂಪೂರ್ಣ ಬಂದ್​ ಮಾಡಲಾಗಿದೆ. ಹೀಗಿರುವಾಗ ಎಲ್ಲ ರಾಜ್ಯಗಳಲ್ಲಿ ಲಾಕ್​ಡೌನ್​ ವೇಳೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಷಾ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜತೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಕರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಶ್ಲಾಘಿಸಿದ್ದಾರೆ ಎನ್ನಲಾಗಿದೆ.

    ನರೇಂದ್ರ ಮೋದಿಯವರ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, ಇಡೀ ರಾಜ್ಯವನ್ನು ಸಂಪೂರ್ಣ ಲಾಕ್​ಡೌನ್​ಗೆ ಒಳಪಡಿಸಲಾಗಿದೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. ಹಾಗೇ ಎಲ್ಲರಿಗೂ ಅವರ ಅಗತ್ಯಗಳು ಸರಬರಾಜು ಮಾಡಲಾಗುತ್ತಿದೆಯಾ ಎಂಬ ಬಗ್ಗೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಇನ್ನು ರಾಜ್ಯದಲ್ಲಿ ಕ್ವಾರೆಂಟೈನ್​ ವ್ಯವಸ್ಥೆಯನ್ನೂ ಸೂಕ್ತವಾಗಿ ಮಾಡಲಾಗಿದೆ. ಮುಂದೆ ಇನ್ನೆನಾದರೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದರೂ ಕೂಡ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ವಿವರಣೆಗಳಿಂದ ಸಮಾಧಾನಹೊಂದಿಗೆ ಪ್ರಧಾನಿ ನರೇಂದ್ರ ಮೋದಿ, ದೀದಿಯವರನ್ನು ಪ್ರಶಂಸಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕರೊನಾ ವಿರುದ್ಧ ಹೋರಾಡಲು ಯಾವುದೇ ಸಹಾಯ ಬೇಕಾದರೂ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಾಗೇ ಗೃಹಸಚಿವ ಅಮಿತ್​ ಷಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜಯಶಂಕರ್ ಕೂಡ ಮಮತಾ ಬ್ಯಾನರ್ಜಿಯವರೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಲಾಕ್​ಡೌನ್​ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿರುವುದಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.(ಏಜೆನ್ಸೀಸ್​)

    ಮೋದಿಜೀ.. ಕೊಲ್ಕತ್ತಾ ಏರ್​ಪೋರ್ಟ್​ಗೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

    ಕರೊನಾ ವೈರಸ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತ, ಅದೇ ಸೋಂಕಿಗೆ ಬಲಿಯಾದರಾ ದೆಹಲಿಯ ಈ ವೈದ್ಯ? ಫ್ಯಾಕ್ಟ್​ಚೆಕ್​​ನಲ್ಲಿ ಬಯಲಾಗಿದ್ದು ಶಾಕಿಂಗ್​ ಸತ್ಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts