More

    ಭಾರತ ತನ್ನೆಲ್ಲ ಕನಸುಗಳನ್ನು ನನಸಾಗಿಸಿಕೊಳ್ಳಲು ಸಜ್ಜಾಗಿದೆ: ಪ್ರಧಾನಿ ಮೋದಿ

    ನವದೆಹಲಿ: ಹಿಂದಿನ ಭಾರತ ಹಾಗೂ ಇಂದಿನ ಭಾರತ ಎರಡರ ಕುರಿತು ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಇದೀಗ ತನ್ನೆಲ್ಲ ಕನಸುಗಳನ್ನು ನನಸಾಗಿಸಿಕೊಳ್ಳಲು ಸಜ್ಜಾಗಿದೆ ಎಂದು ಹೇಳಿದ್ದಾರೆ. ಇಂದು ಜರ್ಮನಿಯಲ್ಲಿ ಅಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಒಂದು ಕಾಲದಲ್ಲಿ ಭಾರತ ಸ್ಟಾರ್ಟಪ್​ಗಳ ರೇಸ್​ನಲ್ಲೇ ಇರಲಿಲ್ಲ. ಆದರೆ ಈಗ ಸ್ಟಾರ್ಟಪ್​ ವಲಯದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲು ನಾವು ಒಂದು ಸಾಮಾನ್ಯ ಫೋನ್​ ಕೂಡ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ಮೊಬೈಲ್​ಫೋನ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮೋದಿ ಹೇಳಿದರು.

    ನಾವು ಪೆಟ್ರೋಲ್​ಗೆ ಶೇ. 10 ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ನಿಗದಿತ ಗುರಿಗಿಂತ ಐದು ತಿಂಗಳ ಮೊದಲೇ ಸಾಧಿಸಿದ್ದೇವೆ. ಇನ್ನು ಕರೊನಾ ಸಮಯದಲ್ಲಿ ಭಾರತ ತನ್ನ ಪ್ರಜೆಗಳಿಗೆ ಕೋವಿಡ್​-19 ಲಸಿಕೆ ಹಾಕಿಸುವಷ್ಟರಲ್ಲಿ 10-15 ವರ್ಷಗಳೇ ಬೇಕಾಗುತ್ತದೆ ಎಂದು ಆಡಿಕೊಂಡಿದ್ದರು. ಆದರೆ ಈಗಾಗಲೇ ದೇಶದ ಶೇ. 90 ವಯಸ್ಕರು ಎರಡೂ ಡೋಸ್ ಪಡೆದಿದ್ದರೆ, ಶೇ. 95 ವಯಸ್ಕರು ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.

    ಭಾರತವನ್ನು ಪ್ರಜಾಪ್ರಭುತ್ವದ ಮಾತೆ ಎಂದು ಬಣ್ಣಿಸಿದ ಮೋದಿ, ಭಾರತದ ಪ್ರಜಾಪ್ರಭುತ್ವದಲ್ಲಿ ತುರ್ತುಪರಿಸ್ಥಿತಿ ಒಂದು ಕಪ್ಪುಚುಕ್ಕೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೋವಿಡ್​ ಲಸಿಕೆಯಿಂದಾಗಿ ತಪ್ಪಿತು ಭಾರತದ 42 ಲಕ್ಷಕ್ಕೂ ಅಧಿಕ ಮಂದಿಯ ಸಾವು!; ಇಲ್ಲಿದೆ ಅಧ್ಯಯನ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts