More

    ನೆಲ ಕಳೆದುಕೊಳ್ಳುತ್ತಿದೆ ನೇಪಾಳ- ಭೂಭಾಗ ಅತಿಕ್ರಮಿಸುತ್ತ ಮುನ್ನುಗ್ಗುತ್ತಿದೆ ಚೀನಾ!

    ಕಾಠ್ಮಂಡು: ಚೀನಾದ ಸಾಮ್ರಾಜ್ಯಶಾಹಿ ನಡವಳಿಕೆಗೆ ನೇಪಾಳ ಸುಲಭ ತುತ್ತಾಗತೊಡಗಿದೆ. ನೇಪಾಳಕ್ಕೆ ನೆರವಿನ ಹಸ್ತ ಚಾಚುತ್ತಲೇ ಆ ದೇಶದ ಏಳು ಜಿಲ್ಲೆಗಳ ಅನೇಕ ಪ್ರದೇಶಗಳ ಭೂಭಾಗವನ್ನು ಅತಿಕ್ರಮಿಸಿಕೊಂಡಿದೆ. ಇದನ್ನು ನೇಪಾಳ ಸರ್ಕಾರದ ಡೇಟಾವೇ ದೃಢೀಕರಿಸುತ್ತಿದೆ.

    ಇದರಂತೆ, ನೇಪಾಳದ ಗಡಿ ಭಾಗದಲ್ಲಿ ಚೀನಾ ಸೇನೆ ಸ್ವಲ್ಪ ಸ್ವಲ್ಪವೇ ಮುಂದಕ್ಕೆ ಬಂದು ಅಲ್ಲಿ ತನ್ನ ಪಾರಮ್ಯವನ್ನು ಸ್ಥಾಪಿಸತೊಡಗಿದೆ. ಮೂಲಗಳ ಪ್ರಕಾರ ಸರ್ಕಾರದ ಡೇಟಾದಲ್ಲಿರುವ ಅಂಶ ಸಾಂಕೇತಿಕವಾಗಿರಬಹುದು. ಗಡಿ ಭಾಗದಲ್ಲಿ ವಸ್ತುಸ್ಥಿತಿ ಬೇರೆಯೇ ಇರಬಹುದು. ನೇಪಾಳ ಕಮ್ಯೂನಿಸ್ಟ್ ಪಾರ್ಟಿ ಈಗ ತನ್ನ ಅತಿ ಸಂಕಷ್ಟ ಮತ್ತು ಅತ್ಯಂತ ಕೆಟ್ಟ ಕಾಲವನ್ನು ಎದುರಿಸಲಾರಂಭಿಸಿದೆ. ನೇಪಾಳದೊಳಕ್ಕೆ ಚೀನಾ ಅನೇಕ ರಸ್ತೆಗಳನ್ನೂ ನಿರ್ಮಿಸಿದ್ದು, ಆ ಮೂಲಕ ಅಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯತೊಡಗಿದೆ ಎಂದು ನಂಬಲಾಗುತ್ತಿದೆ.

    ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    ನೇಪಾಳ-ಚೀನಾ ಸಂಬಂಧಗಳನ್ನು ಗಮನಿಸುತ್ತಿರುವ ರಾಜತಾಂತ್ರಿಕ ಪರಿಣತರ ಪ್ರಕಾರ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸರ್ಕಾರ ಚೀನಾದ ನಡೆಯನ್ನು ಎದುರಿಸಿದರೆ ಪತನ ಭೀತಿಯನ್ನು ಎದುರಿಸಬೇಕಾಗುತ್ತದೆ. ಇದನ್ನು ಅರಿತೇ ಕೆ.ಪಿ.ಶರ್ಮಾ ಮಗುಮ್ಮಾಗಿ ಕುಳಿತಿದ್ದಾರೆ. ಅವರಿಗೆ ಚೀನಾ ಕಮ್ಯೂನಿಸ್ಟ್ ಪಾರ್ಟಿಯಿಂದ ಎದುರಾಗಬಹುದಾದ ಸಂಭಾವ್ಯ ಅಪಾಯ ಮನದಟ್ಟಾಗಿದೆ. ನೇಪಾಳದ ದೋಲಖಾ, ಗೋರ್ಖಾ, ದಾರ್ಚುಲಾ, ಹುಮ್ಲಾ, ಸಿಂಧುಪ್ಲಾಚೌಕ್​, ಶಂಖುವಸಭಾ ಮತ್ತು ರಸುವಾ ಜಿಲ್ಲೆಗಳ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ.

    ಇದನ್ನೂ ಓದಿ: PHOTOS: ಮನಸೂರೆಗೊಳ್ಳುವ ಫೋಟೋಗಳಲ್ಲಿ ನಗ್ನದೇಹಿ ಮಾಡೆಲ್ ಎಲ್ಲಿದ್ದಾಳೆ! – ಪತ್ತೆ ಹಚ್ಚೋಕೆ ಸಾಧ್ಯಾನಾ ನೋಡಿ…

    ದೋಲಖಾದಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ 1,500 ಮೀಟರ್​ನಷ್ಟು ಒಳಕ್ಕೆ ಚೀನಾ ಆಗಮಿಸಿದೆ. ದೋಲಖಾದ ಕೋರ್ಲಂಗ್​ ಪ್ರದೇಶದಲ್ಲಿ ಪಿಲ್ಲರ್ ನಂ 57ರಲ್ಲಿ ಈ ಅತಿಕ್ರಮಣವಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗಡಿಯ ಪಿಲ್ಲರ್​ಗಳನ್ನು ಮುಂದಕ್ಕೆ ದೂಡುತ್ತ ಬಂದಿರುವ ಚೀನಾ ಈ ಬಗ್ಗೆ ಧ್ವನಿ ಎತ್ತದಂತೆ ನೇಪಾಳದ ಮೇಲೆ ಬೆದರಿಕೆಯಿಂದೊಡಗೂಡಿದ ಒತ್ತಡ ಹೇರಿದೆ. (ಏಜೆನ್ಸೀಸ್)

    ದಾರಿ ತಪ್ಪಿದ ಕ್ಸಿ ಜಿನ್​ಪಿಂಗ್​ಗೆ ಪಾಠ ಕಲಿಸಲು ಹೊರಟಿದ್ದಾರೆ ಲೇಡಿ ಪ್ರೊಫೆಸರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts