More

    ಯೋಧರ ಬಲಿದಾನವನ್ನು ರಾಜಕೀಯಕರಣಗೊಳಿಸಬೇಡಿ; ರಾಹುಲ್​ ಗಾಂಧಿಗೆ ಯೋಧರ ತಂದೆಯ ಮನವಿ

    ನವದೆಹಲಿ: ಭಾರತ ಸೇನಾಪಡೆ ಬಲಿಷ್ಠವಾದ ಸೇನಾಪಡೆಯಾಗಿದೆ. ಬಲಿಷ್ಠ ಎಂದು ಹೇಳಿಕೊಳ್ಳುವ ಚೀನಾವನ್ನು ಸುಲಭವಾಗಿ ಮಣಿಸುವ ಸಾಮರ್ಥ್ಯ ಅದಕ್ಕಿದೆ. ದಯವಿಟ್ಟು ಯೋಧರ ಬಲಿದಾನವನ್ನು ರಾಜಕೀಯಕರಣಗೊಳಿಸಬೇಡಿ ಎಂದು ಲಡಾಖ್​ನ ಪೂರ್ವ ಭಾಗದಲ್ಲಿ ಜೂ.15ರಂದು ಚೀನಾ ಯೋಧರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡಿರುವ ಯೋಧರೊಬ್ಬರ ತಂದೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಜೂ.15ರ ಘರ್ಷಣೆಯಲ್ಲಿ ತಾಯ್ನಾಡಿನ ರಕ್ಷಣೆಯ ವೇಳೆ ಯೋಧ ಸುರೇಂದ್ರ ಸಿಂಗ್​ ಗಾಯಗೊಂಡಿದ್ದಾರೆ. ಇವರ ತಂದೆ ಬಲ್ವಂತ್​ ಸಿಂಗ್​ ಅವರು ಚೀನಾದೊಂದಿಗಿನ ಘರ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ರಾಹುಲ್​ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

    ಈ ಘರ್ಷಣೆಯಲ್ಲಿ ತಾವು ಹೇಗೆ ಗಾಯಗೊಂಡರು ಎಂಬುದನ್ನು ಸುರೇಂದ್ರ ಸಿಂಗ್ ಅವರು ತಮ್ಮ ತಂದೆ ಬಲ್ವಂತ್​ ಸಿಂಗ್​ ಅವರಿಗೆ ವಿವರಿಸಿದ್ದಾರೆ ಎನ್ನಲಾದ ವಿಡಿಯೋ ತುಣುಕನ್ನು ಬಳಸಿಕೊಂಡಿದ್ದ ರಾಹುಲ್​ ಗಾಂಧಿ, ಪ್ರಧಾನಿ ಅವರನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಹಿರಿಯ ಸಚಿವರು ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದಾರೆ. ನಿಮ್ಮ ಸುಳ್ಳುಗಳ ಮೂಲಕ ದಯವಿಟ್ಟು ಹುತಾತ್ಮ ಯೋಧರನ್ನು ಅವಮಾನಿಸಬೇಡಿ #BJPBetraysOurJawans ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಶುಕ್ರವಾರ ಟ್ವೀಟ್​ ಮಾಡಿದ್ದರು.

    ನನ್ನ ಪುತ್ರನಿಂದ ದಿಢೀರ್​ ಎಂದು ಫೋನ್​ ಕರೆ ಬಂದಿತು. ಲೇಹ್​ನಲ್ಲಿ ಎಲ್ಲೋ ತನ್ನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ. ತನಗೆ ಗಾಯವಾಗಿರುವುದಾಗಿ ತಿಳಿಸಿದ. ಆದರೆ, ಈಗ ತನ್ನ ಸ್ಥಿತಿ ತಟಸ್ಥವಾಗಿರುವುದಾಗಿ ಹೇಳಿದ. ನಾವು 200-300 ಜನರಿದ್ದೆವು. ಚೀನಿಯರು 2 ಸಾವಿರದಿಂದ 2,500 ಇದ್ದಿರಬಹುದು. ನಮ್ಮನ್ನು ಸುತ್ತುವರಿದು, ರಾಡ್​ಗಳು, ಬಡಿಗೆಗಳಿಂದ ಹಲ್ಲೆ ಮಾಡಿದರು. ಕಲ್ಲುಗಳನ್ನು ತೂರಿದರು. ನಾವು ಬರಿಗೈಲಿ ಇದ್ದೆವು. ಘರ್ಷಣೆ ಏರ್ಪಟ್ಟಿತು. ದೇವರ ದಯದಿಂದ ನಾವು ಬಚಾವ್​ ಆದೆವು. ನನ್ನ ತಲೆಗೆ 10ರಿಂದ 12 ಹೊಲಿಗೆಗಳನ್ನು ಹಾಕಲಾಗಿದೆ. ಕೈ ಮತ್ತು ಕಾಲಿಗೆ ಗಾಯಗಳಾಗಿವೆ ಎಂದು ಖಾಸಗಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಬಲ್ವಂತ್​ ಸಿಂಗ್​ ಹೇಳಿದ್ದರು. ಈ ವಿಡಿಯೋ ತುಣಕನ್ನು ಬಳಸಿಕೊಂಡು ರಾಹುಲ್​ ಗಾಂಧಿ ಸರ್ಕಾರದ ವಿರುದ್ಧ ಟ್ವಿಟ್ಟರ್​ನಲ್ಲಿ ಹರಿಹಾಯ್ದಿದ್ದರು.

    ಬಲ್ವಂತ್​ ಸಿಂಗ್​ ಅವರು ರಾಹುಲ್​ ಗಾಂಧಿ ಅವರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ, ಭಾರತೀಯ ಸೇನೆ ಬಲಿಷ್ಠವಾಗಿದ್ದು, ಚೀನಾವನ್ನು ಮಣಿಸಬಲ್ಲದ್ದಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರ ವಿಡಿಯೋ ತುಣಕನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ ಟ್ವೀಟ್​ ಮಾಡಿ, ಧೀರ ಯೋಧರ ತಂದೆ ರಾಹುಲ್​ ಗಾಂಧಿ ಅವರಿಗೆ ಒಂದು ಸ್ಪಷ್ಟ ಸಂದೇಶವನ್ನು ಇಲ್ಲಿ ಕೊಟ್ಟಿದ್ದಾರೆ. ಈ ವಿಷಯವಾಗಿ ಇಡೀ ದೇಶವೇ ಒಗ್ಗಟ್ಟಾಗಿರುವಾಗ, ರಾಹುಲ್​ ಗಾಂಧಿ ಅವರು ತುಚ್ಛ ರಾಜಕೀಯದ ಕೀಳು ಮನೋಭಾವ ಬಿಟ್ಟು ಮೇಲೇಳಬೇಕು. ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಯಲು ದೇಶದೊಂದಿಗೆ ಕೈಜೋಡಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

    ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts