More

    ಟ್ವಿಟರ್​ ವಿರುದ್ಧ ದೆಹಲಿ ಹೈಕೋರ್ಟ್​ಗೆ ಅರ್ಜಿ

    ನವದೆಹಲಿ : ಟ್ವಿಟರ್​ ವಿರುದ್ಧ ಕೇಂದ್ರ ಸರ್ಕಾರ ಕೆಂಗಣ್ಣು ತೋರಿರುವ ಬೆನ್ನಲ್ಲೇ ದೆಹಲಿಯ ವಕೀಲರೊಬ್ಬರು ಟ್ವಿಟರ್​​ ಇಂಡಿಯಾ ಮತ್ತು ಟ್ವಿಟರ್ ಇಂಕ್​ಗೆ ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಟ್ವಿಟರ್​ ತನ್ನ ಬಳಕೆದಾರರ ದೂರುಗಳನ್ನು ನಿರ್ವಹಿಸಲು ಭಾರತದಲ್ಲೇ ವಾಸಿಸುವ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಲು ಕೇಂದ್ರ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಸರ್ಕಾರವನ್ನೂ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

    ದೆಹಲಿ ಹೈಕೋರ್ಟ್​ ಮತ್ತು ಸುಪ್ರೀಂ ಕೋರ್ಟ್​ ವಕೀಲರಾದ ಅಮಿತ್​ ಆಚಾರ್ಯ ಅವರು ಸಲ್ಲಿಸಿರುವ ರಿಟ್​ ಅರ್ಜಿಯಲ್ಲಿ, ಫೆಬ್ರವರಿ 25 ರಂದು ಕೇಂದ್ರ ಐಟಿ ಸಚಿವಾಲಯ ಜಾರಿಗೊಳಿಸಿದ ಇನ್​ಫರ್ಮೇಷನ್ ಟೆಕ್ನಾಲಜಿ (ಇಂಟರ್​ಮೀಡಿಯರಿ ಗೈಡ್​ಲೈನ್ಸ್​ ಅಂಡ್​ ಡಿಜಿಟಲ್ ಮೀಡಿಯಾ ಎಥಿಕ್ಸ್​ ಕೋಡ್​) ರೂಲ್ಸ್​, 2021 ಅನ್ನು ಟ್ವಿಟರ್ ಪಾಲಿಸುತ್ತಿಲ್ಲ ಎಂದು ಹೇಳಲಾಗಿದೆ. ಸ್ವತಃ ಟ್ವಿಟರ್​ ಬಳಕೆದಾರರಾದ ಅರ್ಜಿದಾರರು ಇಬ್ಬರು ವ್ಯಕ್ತಿಗಳ ಮಾನಹಾನಿ ಮಾಡುವಂತಹ ಸುಳ್ಳು ಟ್ವೀಟ್​ಗಳ​ ಬಗ್ಗೆ ದೂರು ನೀಡಲು ಪ್ರಯತ್ನಿಸಿದಾಗ, ಯಾವುದೇ ಅಧಿಕಾರಿಯ ವಿವರಗಳನ್ನು ಟ್ವಿಟರ್​ ನೀಡಿಲ್ಲದಿರುವುದು ಕಂಡುಬಂತು ಎನ್ನಲಾಗಿದೆ.

    ಇದನ್ನೂ ಓದಿ: ಸುಖಾಸುಮ್ಮನೆ ಮಾತನಾಡಬೇಡಿ, ದೇಶದ ಕಾನೂನು ಪಾಲಿಸಿ : ಟ್ವಿಟರ್​ಗೆ ಸರ್ಕಾರದ ತಿರುಗೇಟು

    ಟ್ವಿಟರ್​ ಸಿಗ್ನಿಫಿಕೆಂಟ್ ಸೋಷಿಯಲ್ ಮೀಡಿಯ ಇಂಟರ್​ಮೀಡಿಯರಿ (ಎಸ್​ಎಸ್​ಎಂಐ) ಆಗಿರುವ ಕಾರಣ ಕೇಂದ್ರ ಸರ್ಕಾರ ಮೇ 26 ರಂದು ಎಸ್​ಎಸ್​ಎಂಐಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಜಾರಿ ಮಾಡಿರುವ ಆದೇಶವನ್ನು ಪಾಲಿಸಬೇಕು ಎಂದಿರುವ ಅರ್ಜಿದಾರರು, ನಿಯಮ 4(ಸಿ) ಅನ್ವಯ ಪ್ರತಿ ಎಸ್​ಎಸ್​ಎಂಐ ಓರ್ವ ರೆಸಿಡೆಂಟ್​ ಗ್ರೀವೆನ್ಸ್ ಆಫೀಸರ್​​ಅನ್ನು ಬಳಕೆದಾರರ ದೂರುಗಳನ್ನು ಕೇಳಿ ಇತ್ಯರ್ಥ ಮಾಡಲು ನೇಮಕ ಮಾಡಬೇಕು. ಆದರೆ ಟ್ವಿಟರ್​ ಇಂಡಿಯಾ ಈ ಅಧಿಕಾರಿಯನ್ನಾಗಲೀ, ನಿಯಮಗಳು ಹೇಳುವಂತೆ ನೋಡಲ್ ಆಫಿಸರ್​ ಅಥವಾ ಚೀಫ್ ಕಂಪ್ಲೈಯನ್ಸ್ ಆಫೀಸರನ್ನಾಗಲೀ ನೇಮಕ ಮಾಡಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

    ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !

    ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts