More

  ಪ್ಲಾಸ್ಟಿಕ್ ಬಳಕೆ ಸಂಪೂರ್ಣ ತ್ಯಜಿಸಿ

  ಸಿಂಧನೂರು: ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದರೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ನೈರ್ಮಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನ್ಯಾಯಾಧೀಶೆ ದೀಪಾ ಮನೇರ್‌ಕರ್ ಹೇಳಿದರು.

  ನಗರದ ಬಾಬಾ ರಾಮದೇವ್ ದೇವಸ್ಥಾನ ಪಕ್ಕದ ಉದ್ಯಾನದಲ್ಲಿ ನಗರಭೆಯಿಂದ ಸ್ವಯಂ ಸೇವಕರ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ವ್ಯಾಪಾರಿಗಳು ಪ್ಲಾಸ್ಟಿಕ್ ಸಂಪೂರ್ಣ ವರ್ಜಿಸಬೇಕು. ಸ್ವಚ್ಛತೆ ಕಾರ್ಯ ಒಂದು ದಿನಕ್ಕೆ ಸೀಮಿತವಾಗದೆ, ನಿರಂತರ ನಡೆಯಬೇಕು. ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿ, ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

  ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಸ್ವಚ್ಛ ಹಾಗೂ ಹಸಿರು ಸಿಂಧನೂರಿಗಾಗಿ ಸರ್ವರೂ ಮನೆಗೊಂದು ಸಸಿ ನೆಡಬೇಕು ಎಂದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ಧೂಳು, ಕಸಮುಕ್ತ ಸಿಂಧನೂರಿಗಾಗಿ ಸಾರ್ವಜನಿಕರು ಹಸಿ, ಒಣ ತ್ಯಾಜ್ಯ ವಿಂಗಡಿಸಿ ನಗರಸಭೆ ವಾಹನಗಳಿಗೆ ಹಾಕಬೇಕು. ಉದ್ಯಾನಗಳ ರಕ್ಷಣೆ ಮಾಡಬೇಕು. ವಿವಿಧ ಸಂಘಟನೆಗಳು ನಗರಸಭೆಯೊಂದಿಗೆ ಕೈಜೋಡಿಸಿ ಸ್ವಚ್ಛ ಸಿಂಧನೂರಿಗೆ ಪಣ ತೊಡಬೇಕೆಂದರು.

  ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತ ಹಾಗೂ ಪಿಡಬ್ಲ್ಯುಡಿ ಕ್ಯಾಂಪ್ ಉದ್ಯಾನ, ಕಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮೀಪತಿ ನೇತೃತ್ವದಲ್ಲಿ ಬಡಿಬೇಸ್ ಸರ್ಕಾರಿ ಶಾಲೆ, ಫಾತಿಮಾ ಪಂಕ್ಷನ್ ಹಾಲ್, ಜಾಮೀಯಾ ಮಸೀದಿ, ಹಿರಿಯ ಆರೋಗ್ಯ ನಿರೀಕ್ಷಕ ಕಿಶನರಾವ್ ನೇತೃತ್ವದಲ್ಲಿ ಸಾರ್ವಜನಿಕರ ಆಸ್ಪತ್ರೆ, ಪೊಲೀಸ್ ಠಾಣೆ, ಗಾಂಧಿ ವೃತ್ತ ಹಾಗೂ ಬಾಬಾ ರಾಮದೇವ್ ದೇವಸ್ಥಾನದ ಹತ್ತಿರದ ಉದ್ಯಾನದಲ್ಲಿ ಶ್ರಮದಾನ ಕೈಗೊಳ್ಳಲಾಯಿತು.

  ನಗರಸಭೆ ಸದಸ್ಯ ದಾಸರಿ ಸತ್ಯನಾರಾಯಣ, ಪ್ರಮುಖರಾದ ಆರ್.ಸಿ. ಪಾಟೀಲ್, ಶಿವರಾಜ ಹಟ್ಟಿ, ಅಬ್ದುಲ್, ದುರ್ಗಪ್ಪ, ಚಂದು ಮೈಲಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts