More

    ಪ್ಲಾಸ್ಟಿಕ್ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

    ನ್ಯಾಮತಿ: ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಪಪಂ ಆಡಳಿತ ಅಧಿಕಾರಿ, ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ ಹೇಳಿದರು.

    ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಸ್ಮರಣಾರ್ಥ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ತಾಲೂಕು ಆಡಳಿತ, ಪಪಂ, ಸಾರ್ವಜನಿಕರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯ ಶ್ರಮದಾನ ಮಾಡಿ ಮಾತನಾಡಿದರು.

    ಆರೋಗ್ಯ ಹಿತದೃಷ್ಟಿಯಿಂದ ನಮ್ಮ ಸುತ್ತಮುತ್ತಲ ಆವರಣ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

    ಸಾರ್ವಜನಿಕರು ನಿತ್ಯ ಕಸವನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಹಾಕಬೇಕು. ಹಸಿಕಸ, ಒಣಕಸ ವಿಂಗಡಣೆ ಮಾಡಿ ಪಾಲಿಕೆಯ ತ್ಯಾಜ್ಯ ವಸ್ತು ವಿಲೇವಾರಿ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.

    ಪಪಂ ಮುಖ್ಯಾಧಿಕಾರಿ ಪಿ. ಗಣೇಶರಾವ್, ಡಾ. ರೇಣುಕಾನಂದ ಎಂ. ಮೆಣಸಿಕಾಯಿ, ಗ್ರಾಪಂ ಮಾಜಿ ಸದಸ್ಯರಾದ ಸುನೀತಾ, ಗೀತಾ, ಮುಖಂಡರಾದ ಆರುಂಡಿ ಹಂಪಣ್ಣ, ಗುಂಡೂರು ಲೋಕೇಶ್, ಷಣ್ಮುಖಪ್ಪ ವಾಲ್ಮೀಕಿ, ಕರಿಬಸಪ್ಪ ಮತ್ತಿತರರಿದ್ದರು.

    ನಂತರ, ತಾಲೂಕು ಕಚೇರಿ ಆವರಣ, ಕೆರೆ ಏರಿ, ಅರಳಿಕಟ್ಟೆ, ವೀರಭದ್ರೇಶ್ವರ ದೇಗುಲ, ಸಮುದಾಯ ಆರೋಗ್ಯ ಕೇಂದ್ರ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛ ಮಾಡಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts