More

    ಹಾಳಾದ ಹತ್ತಿ ಫಸಲು, ಕೃಷಿ ಅಧಿಕಾರಿಗಳಿಂದ ಪರಿಶೀಲನೆ

    ಅಳವಂಡಿ: ಹತ್ತಿ ಬೆಳೆಗೆ ಕೆಂಪು ರೋಗ ತಗುಲಿರುವ ಹಿನ್ನೆಲೆಯಲ್ಲಿ ಹೋಬಳಿಯ ರಘುನಾಥನಹಳ್ಳಿಯ ಜಮೀನೊಂದಕ್ಕೆ ಕೊಪ್ಪಳದ ಸಹಾಯಕ ಕೃಷಿ ಅಧಿಕಾರಿ ಜೀವನಸಾಬ್ ಕುಷ್ಟಗಿ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಮುಂಗಾರು ಮಳೆ ಕೊರತೆ, ಬಿಸಿಲಿನ ತಾಪ ಇತರ ಕಾರಣದಿಂದ ಹತ್ತಿ ಬೆಳೆ ಕೆಂಪು ರೋಗಕ್ಕೆ ತುತ್ತಾಗಿದೆ. ಎಲ್ಲೆಡೆ ಬೆಳೆ ಪರಿಶೀಲಿಸುತ್ತಿದ್ದು, ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಾಗುವುದು ಎಂದು ಜೀವನಸಾಬ್ ತಿಳಿಸಿದರು.

    ಇದನ್ನೂ ಓದಿ: ಹೆಸರು ಬೆಳೆಗೆ ಹಳದಿ ನಂಜಾಣು ರೋಗ

    ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ, ಎಎಒ ವೀರೇಶ ಪಟ್ಟೇದ, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಮಲ್ಲಮ್ಮ, ಗ್ರಾಮ ಸಹಾಯಕ ಹನುಮಂತ ವಾಲಿಕಾರ, ರೈತರಾದ ವೆಂಕಟೇಶ ಕಮತರ, ರಾಜು ಕಮತರ, ರಾಮಣ್ಣ ಕಾಳಿ, ನಾಗಪ್ಪ ಕವಲೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts