More

    ನಗರ/ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿ ಪದನಾಮ ಬದಲು

    ಬೆಂಗಳೂರು: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯನ್ನು ‘ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ ಎಂದು ಪದನಾಮಿಕರಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಪ್ರಸ್ತುತ ರಾಜ್ಯದಲ್ಲಿ 31 ನಗರಾಭಿವೃದ್ಧಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಾಧಿಕಾರಗಳಲ್ಲಿನ ಆಯವ್ಯಯವು 50.00 ಕೋಟಿ ರೂ.ಗಳಿಂದ 500 ಕೋಟಿ ರೂ.ಗಳವರೆಗೆ ಇದೆ.

    ಹಲವಾರು ಪ್ರಾಧಿಕಾರಗಳಲ್ಲಿ ವಸತಿ ಯಾಜನೆ/ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಸಾರ್ವಜನಿಕ ಯೋಜನೆಯನ್ನು ಕೈಗೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಈ ಪ್ರಾಧಿಕಾರಗಳಿಗೆ ಕೆ.ಎ.ಎಸ್. ಹಾಗೂ ಕೆ.ಎಂ.ಎ.ಎಸ್. ಅಧಿಕಾರಿಗಳನ್ನು ಸರ್ಕಾರವು ನೇರವಾಗಿ ನೇಮಕ ವರದಿ ಮಾಡಿಕೊಳ್ಳುತ್ತಿರುವುದರಿಂದ ಈ ಪ್ರಾಧಿಕಾರಗಳ ಮೇಲುಸ್ತುವಾರಿ/ಹತೋಟಿ ಕಷ್ಟಸಾಧ್ಯವಾಗುತ್ತಿದೆ.
    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಾಯಕ ನಿರ್ದೇಶಕರ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಇಲಾಖೆ ಬೇರೆ ಇಲಾಜತೆ ಸಮನ್ವಯ ಸಾಧಿಸಬೇಕಾಗುತ್ತದೆ. ಆಗ ಮೇಲುಸ್ತುವಾರಿ ಕಷ್ಟವಾಗುತ್ತದೆ.

    ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬಿ.ಡಿ.ಎ, ಬಿ.ಎಂ.ಆರ್.ಡಿ.ಎ., ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯು ಕ್ಷೇತ್ರ ಇಲಾಖೆಗಳಾಗಿ ಕಾರ್ಯನಿರ್ವಹಿಸುತ್ತಿರುತ್ತವೆ.
    ಈ ಹಿನ್ನೆಲೆಯಲ್ಲಿ ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ಮೇಲುಸ್ತುವಾಗಿ ವಹಿಸಲು ಅನುಕೂಲವಾಗು ದೃಷ್ಟಿಯಿಂದ

    ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು (ಬಿಡಿಎ, ಬಿಬಿಎಂಪಿ, ಬಿ.ಎಂ.ಆರ್.ಡಿ.ಎ, ಬಿ.ಎಂ.ಐ.ಸಿ.ಎ.ಪಿ.ಎ. ಹೊರತುಪಡಿಸಿ) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಯ ಉತ್ತಮ ಆಡಳಿತ ನಿರ್ವಹಣೆ ಹಾಗೂ ಅರ್ಥಿಕ ನಿಯಂತ್ರಣವನ್ನು ಸಾಧಿಸುವ ಸಲುವಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಆಯುಕ್ತಾಲಯ ಎಂದು ಪದನಾಮೀಕರಿಸಿ ಆದೇಶ ಹೊರಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts