More

    ಯೋಜನೆ ಸದ್ಬಳಕೆಯಾಗಲಿ

    ದೊಡವಾಡ: ಗ್ರಾಮದ ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರಿಯಾಯತಿ ದರದಲ್ಲಿ ಕಡಲೆ ಬೀಜ ವಿತರಣೆಗೆ ಶನಿವಾರ ಚಾಲನೆ ನೀಡಲಾಯಿತು.

    ಸಂಘದ ಅಧ್ಯಕ್ಷ ವಿರೇಂದ್ರ ಸಂಗೊಳ್ಳಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ವಯ ರೈತರಿಗೆ ರಸೀದಿ ನೀಡಿ, ಹೊರವಲಯದಲ್ಲಿರುವ ಕಡಲೆ ಬೀಜ, ಜೋಳ, ದಾಸ್ತಾನು ಕೇಂದ್ರದಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸರ್ಕಾರ ಪ್ರಕಟಿಸಿರುವ ಸಾಮಾನ್ಯ ವರ್ಗದ ರೈತರಿಗೆ 20 ಕೆಜಿ ಕಡಲೆ ಬೀಜಕ್ಕೆ 1,200 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 950 ರೂ. ದರ ಮತ್ತು 5 ಕೆಜಿ ಜೋಳದ ಪ್ಯಾಕೆಟ್‌ಗೆ ಸಾಮಾನ್ಯ ವರ್ಗದ ರೈತರಿಗೆ 204 ರೂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 174 ರೂ.ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

    ಬೈಲಹೊಂಗಲ ಸಹಾಯಕ ಕೃಷಿ ಅಧಿಕಾರಿ ಎಸ್.ಎಸ್.ಮಾಳಗಿ, ಗ್ರಾಮ ಲೆಕ್ಕಾಧಿಕಾರಿ ಈರಪ್ಪ ಹಂದೂರ, ಉಪಾಧ್ಯಕ್ಷ ಬಸವರಾಜ ಮುರಗೋಡ, ನಿರ್ದೇಶಕರಾದ ನಿಂಗಪ್ಪ ಚೌಡನ್ನವರ, ಉದಯ ಕೊಟಬಾಗಿ ನಾಗಪ್ಪ ಸವದತ್ತಿ, ವಿಠ್ಠಲ ಗಾಬಿ, ಚನ್ನಯ್ಯ ದಾಬಿಮಠ, ಲಕ್ಕಪ್ಪ ಅಲಕ್ಕನವರ, ರುದ್ರಪ್ಪ ಕೋಟಗಿ, ಪರಪ್ಪ ಚೌಡನ್ನವರ, ಪಿಕೆಪಿಎಸ್ ಕಾರ್ಯದರ್ಶಿ ಎಂ.ಎಸ್.ಶಿಂಧೆ, ಸಿಬ್ಬಂದಿ ಹನುಮಂತ ಸಪ್ಪಡ್ಲಿ, ವಿಜಯ ರೇಷ್ಮಿ, ವಿರೂಪಾಕ್ಷಪ್ಪ ಪಟಾತ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts