More

    ಸರಾಸರಿ ರೇಟಿಂಗ್​ ಪಡದ ಮೋದಿ, ಈಡನ್ ಗಾರ್ಡನ್ಸ್‌ – ಪಿಚ್​ಗಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಯಾರು?

    ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಯೋಜಿದಸಿದ್ದ ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಬಳಸಲಾದ ಪಿಚ್‌ಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸರಾಸರಿ ರೇಟಿಂಗ್ ನೀಡಿದೆ.

    ಇದನ್ನೂ ಓದಿ:ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ರಾಮಮಂದಿರ ಸಿದ್ಧ; ಜೋಧ್‌ಪುರದಿಂದ ವೃಷಭ ಗಾಡಿಗಳಲ್ಲಿ ಬಂದ 600 ಕೆ.ಜಿ.ಹಸುವಿನ ತುಪ್ಪ 
    ನ.19 ರಂದು ವಿಶ್ವಕಪ್ ಫೈನಲ್​ಗೆ ಬಳಸಿದ ಪಿಚ್‌ನಲ್ಲಿ ಆಸ್ಟ್ರೇಲಿಯಾವು ಟೀಂ ಇಂಡಿಯಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ನಂತರ ಆರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗರಿಯನ್ನು ಮುಡಿಗೇರಿಸಿಕೊಂಡಿತು. ನಿಧಾನಗತಿಯ ಅಹಮದಾಬಾದ್ ವಿಕೆಟ್‌ನಲ್ಲಿ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದ ಆಸೀಸ್ ಭಾರತವನ್ನು 50 ಓವರ್‌ಗಳಲ್ಲಿ 240 ಕ್ಕಿಂತ ಕಡಿಮೆ ಮೊತ್ತಕ್ಕೆ ನಿರ್ಬಂಧಿಸಿತು. ಪ್ರತ್ಯುತ್ತರವಾಗಿ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಕೇವಲ 43 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿದ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸಿ ಪಂದ್ಯದ ಗೆಲುವಿನ ರೂವಾರಿಯಾದರು.

    ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯವು ಕಡಿಮೆ ಸ್ಕೋರಿಂಗ್ ಆಗಿ ಹೊರಹೊಮ್ಮಿತು. ಆಸೀಸ್ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ದಕ್ಷಿಣ ಆಫ್ರಿಕಾವನ್ನು ಆಲೌಟ್ ಮಾಡಿತು. ನಂತರ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಮುಗಿಸಿತು.
    ಫೈನಲ್‌ನಲ್ಲಿ ಆಸ್ಟ್ರೇಲಿಯನ್ನರು ಅಹಮದಾಬಾದ್ ಟ್ರ್ಯಾಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪಂದ್ಯದ ಪೂರ್ವ ಪ್ರೆಸ್ಸರ್‌ನಲ್ಲಿ ನಾಯಕ ಕಮಿನ್ಸ್ ಇದನ್ನು ‘ಒಳ್ಳೆಯ ವಿಕೆಟ್’ ಎಂದು ಕರೆದರೂ, ಹಲವರು ಪಿಚ್ ಹಿಮ್ಮುಖವಾಯಿತು ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದರು. ಎರಡನೇ ಸೆಮಿಫೈನಲ್‌ನಲ್ಲಿ ಬಳಸಲಾದ ಪಿಚ್​ ಬಗ್ಗೆಯೂ ಅಪಸ್ವರಗಳು ಕೇಳಿ ಬಂದಿದ್ದವು.

    ಈ ಎಲ್ಲ ಹಿನ್ನೆಲೆಯಲ್ಲಿ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್‌ಗಾಗಿ ಬಳಸಲಾದ ಟ್ರ್ಯಾಕ್ ಅನ್ನು ರೇಟಿಂಗ್​ ಮಾಡಿದ್ದಾರೆ. ಕೋಲ್ಕತ್ತಾದ ಪಿಚ್ ಅನ್ನು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ರೇಟಿಂಗ್​ ಮಾಡಿದ್ದಾರೆ.
    ವಿಶ್ವಕಪ್ ಫೈನಲ್ ಮತ್ತು ಎರಡನೇ ಸೆಮಿಫೈನಲ್‌ಗೆ ಬಳಸಲಾದ ಪಿಚ್‌ಗಳು ‘ಸರಾಸರಿ’ ರೇಟಿಂಗ್ ಅನ್ನು ಪಡೆದಿವೆ ಎಂದು ಆಂಡಿ ಪೈಕ್ರಾಫ್ಟ್ ಮತ್ತು ಜಾವಗಲ್ ಶ್ರೀನಾಥ್ ಸರಾಸರಿ ರೇಟಿಂಗ್​ ಪಡೆದಿವೆ ಎಂದು ಹೇಳಿದ್ದಾರೆ.

    ಹೆಚ್ಚಿನ ಪಿಚ್‌ಗಳು ಸರಾಸರಿ ರೇಟಿಂಗ್‌:
    ಟೀಮ್ ಇಂಡಿಯಾ ಆಡಿದ 11 ಪಂದ್ಯಗಳಲ್ಲಿ 5ಕ್ಕೆ ಬಳಸಲಾದ ಪಿಚ್‌ಗಳು ಐಸಿಸಿಯಿಂದ ಸರಾಸರಿ ರೇಟಿಂಗ್ ಅನ್ನು ಪಡೆದಿವೆ. ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ, ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ, ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ನಡೆದ ಟ್ರ್ಯಾಕ್‌ಗಳನ್ನು ಸರಾಸರಿ ಐಸಿಸಿ ರೇಟಿಂಗ್ ಮಾಡಿದೆ.

    ಬಿಜೆಪಿ ಅಚ್ಚರಿ ಆಯ್ಕೆ ಸಾಧ್ಯತೆ; ಹಳಬರಿಗೆ ಕೊಕ್, ಹೊಸ ನಾಯಕತ್ವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts