More

    ಮುಂಬೈ ಇಂಡಿಯನ್ಸ್​ಗೆ ಇಂದು ಪಂಜಾಬ್​ ಕಿಂಗ್ಸ್​ ಸವಾಲು: ಸ್ಟಾರ್​ ಆಟಗಾರ ಅಲಭ್ಯ

    ಮುಲ್ಲನ್​ಪುರ: ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆಯೊಂದಿಗೆ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ತಂಡಗಳು ಐಪಿಎಲ್​&17ರಲ್ಲಿ ಮುಖಾಮುಖಿಯಾಗಲಿವೆ. ಗುರುವಾರ ಮಹಾರಾಜ ಯದವೀಂದ್ರ ಸಿಂಗ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ತಂಡಗಳು ಪುಟಿದೇಳುವ ತವಕದಲ್ಲಿದ್ದು, ಜಯದ ಹಳಿಗೇರುವ ವಿಶ್ವಾಸದಲ್ಲಿವೆ.

    ಮುಂಬೈ ಇಂಡಿಯನ್ಸ್​ ತಂಡ ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಸಿಎಸ್​ಕೆ ಎದುರು ತವರಿನಲ್ಲಿ ಸೋಲುಂಡಿರುವುದು ಪ್ರಮುಖ ಹಿನ್ನಡೆ ಎನಿಸಿದೆ. ಆಡಿರುವ ಆರು ಪಂದ್ಯಗಳಲ್ಲಿ 2 ಗೆಲುವು, 4 ಸೋಲಿನೊಂದಿಗೆ 4 ಅಂಕ ಕಲೆಹಾಕಿದೆ. ಪಂಜಾಬ್​ ಕಿಂಗ್ಸ್​ ಸಹ ಸತತ ಸೋಲಿನಿಂದ ಬಳಲುತ್ತಿದ್ದು, 6 ಪಂದ್ಯದಲ್ಲಿ 2 ಗೆಲುವು, 4 ಸೋಲಿನೊಂದಿಗೆ 2 ಅಂಕ ಪಡೆದಿದೆ. ರನ್​ರೇಟ್​ ಆಧಾರದಲ್ಲಿ ಪಂಜಾಬ್​ ಮೇಲುಗೈ ಸಾಧಿಸಿದೆ. ಭುಜದ ಗಾಯಕ್ಕೆ ತುತ್ತಾಗಿರುವ ಕಾಯಂ ನಾಯಕ ಶಿಖರ್​ ಧವನ್​ ಗೈರು ಪಂಜಾಬ್​ ತಂಡಕ್ಕೆ ಕಾಡಲಿದೆ.

    ಬ್ಯಾಟರ್​ಗಳ ಅಸ್ಥಿರ ನಿರ್ವಹಣೆ ಹಾಲಿ ಟೂರ್ನಿಯಲ್ಲಿ ಪುಟಿದೇಳುವ ಹಂಬಲದಲ್ಲಿರುವ ಪಂಜಾಬ್​ ಪ್ಲೇ ಆ್​ ಅವಕಾಶ ವೃದ್ಧಿಸಿಕೊಳ್ಳು ಸರ್ವಾಂಗೀಣ ನಿರ್ವಹಣೆ ತೋರುವುದು ಅನಿವಾರ್ಯ ಎನಿಸಿದೆ. ಜಾನಿ ಬೇರರ್​ ಸ್ಟೋ ರನ್​ ಬರ ಎದುರಿಸಿದ್ದಾರೆ.ಶಶಾಂಕ್​ ಸಿಂಗ್​ ಮತ್ತು ಅಶುತೋಷ್​ ಶರ್ಮ ಹೊರತುಪಡಿಸಿದರೆ, ಅಗ್ರ ಕ್ರಮಾಂಕ ಬ್ಯಾಟರ್​ಗಳು ಟೂರ್ನಿಯಲ್ಲಿ ಇದುವರೆಗೂ ಲಯ ಕಂಡುಕೊಂಡಿಲ್ಲ. ಪ್ರಭ್​ ಸಿಮ್ರಾನ್​ ಸಿಂಗ್​ ಆರು ಪಂದ್ಯಗಳಲ್ಲಿ 119 ರನ್​, ವಿಕೆಟ್​ ಕೀಪರ್​&ಬ್ಯಾಟರ್​ ಜಿತೇಶ್​ ಶರ್ಮ ಕೇವಲ 106 ರನ್​ಗಳಿಸಿರುವುದು ಕಳವಳಕಾರಿ ಎನಿಸಿದೆ. ಹಂಗಾಮಿ ನಾಯಕ ಸ್ಯಾಮ್​ ಕರನ್​ (126 ರನ್​ ಮತ್ತು 8 ವಿಕೆಟ್​) ಮತ್ತು ಕಗಿಸೊ ರಬಾಡ (9) ಅವರಿಗೆ ಇತರ ಬೌಲರ್​ಗಳಿ ಬೆಂಬಲ ಒದಗಿಸಬೇಕಿದೆ. ಮುಂಬೈನ ಬಲಿಷ್ಠ ಬ್ಯಾಟಿಂಗ್​ ಕ್ರಮಾಂಕ ಎದುರು ಪಂಜಾಬ್​ ಬೌಲರ್​ಗಳಿಗೆ ಅಗ್ನಿಪರೀೆ ಎದುರಾಗಲಿದೆ.

    ಪಾಂಡ್ಯಗೆ ಕಂಬ್ಯಾಕ್​ ತುಡಿತ! ನೂತನ ನಾಯಕನಾಗಿ ನೇಮಕಗೊಂಡ ಬಳಿಕ ಟೂರ್ನಿಯಲ್ಲಿ ಏರಿಳಿತ ಕಂಡಿರುವ ಹಾರ್ದಿಕ್​ ಪಾಂಡ್ಯ ಟೂರ್ನಿಯಲ್ಲಿ ಕಂಬ್ಯಾಕ್​ ಮಾಡುವ ಹಂಬಲದಲ್ಲಿದ್ದಾರೆ. ಸತತ 3 ಸೋಲಿನ ಬಳಿಕ ಗೆಲುವಿನ ಹಳಿಗೇರಿದ್ದ ಮುಂಬೆಗೆ, ಸಿಎಸ್​ಕೆ ಎದುರಿನ ಸೋಲು ಹಿನ್ನಡೆ ತಂದಿದೆ. ರೋಹಿತ್​ ಮತ್ತು ಇಶಾನ್​ ಕಿಶನ್​ ಅವರ ಫಾಮ್​ರ್ ಮುಂಬೈ ಇಂಡಿಯನ್ಸ್​ಗೆ ನಿರ್ಣಾಯಕ ಎನಿಸಿದೆ. ಜತೆಗೆ ಸೂರ್ಯಕುಮಾರ್​ ಯಾದವ್​ ಟೂರ್ನಿಯಲ್ಲಿ ಮಿಶ್ರ ಲಿತಾಂಶ ಅನುಭವಿಸಿದ್ದಾರೆ. ಜಸ್​ಪ್ರೀತ್​ ಬುಮ್ರಾಗೆ ಸಾಥ್​ ನೀಡುವಲ್ಲಿ ಗೆರಾಲ್ಡ್​ ಕೋಟ್​ ಜೀ (9 ವಿಕೆಟ್​), ಆಕಾಶ್​ ಮಧ್ವಲ್​ (4) ಸಲರಾದರೂ, ಪ್ರತಿ ಓವರ್​ಗೆ 10ಕ್ಕೂ ಹೆಚ್ಚು ರನ್​ ನೀಡಿ ದುಬಾರಿಯಾಗಿದ್ದಾರೆ.

    ಮುಖಾಮುಖಿ: 31
    ಮುಂಬೈ: 16
    ಪಂಜಾಬ್​: 15
    ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts