More

    ಆಕಾಶಭವನ ಶರಣ್, ಪಿಂಕಿ ನವಾಜ್ ವಿರುದ್ಧ ಗೂಂಡಾ ಕಾಯ್ದೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದ ಆಕಾಶಭವನದ ಕಾಫಿಗುಡ್ಡೆ ಕ್ರಾಸ್ ನಿವಾಸಿ ರೋಹಿದಾಸ್ ಯಾನೆ ಆಕಾಶಭವನ ಶರಣ್ ಹಾಗು ಕಾಟಿಪಳ್ಳದ 2ನೇ ಬ್ಲಾಕ್ ನಿವಾಸಿ ಮಹಮ್ಮದ್ ನವಾಜ್ ಯಾನೆ ಪಿಂಕಿ ನವಾಜ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ, ಮಂಗಳೂರು ಜೈಲ್‌ನಲ್ಲಿ ಬಂಧಿಸಿಡುವಂತೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.

    ಆಕಾಶಭವನ ಶರಣ್ ವಿರುದ್ಧ ಮಂಗಳೂರು ನಗರ 15, ದ.ಕನ್ನಡ ಜಿಲ್ಲೆ 2, ಉಡುಪಿ ಜಿಲ್ಲೆಯಲ್ಲಿ 2 ಸೇರಿದಂತೆ 19 ಪ್ರಕರಣ, ಪಿಂಕಿ ನವಾಜ್ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 12, ದಕ್ಷಿಣ ಕನ್ನಡದಲ್ಲಿ 3 ಸೇರಿದಂತೆ ಒಟ್ಟು 15 ಪ್ರಕರಣಗಳು ಈತನ ಮೇಲಿದೆ. ಕೊಲೆ, ಕೊಲೆ ಯತ್ನ, ಮನೆ ಕಳವು,ದರೋಡೆ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts