More

    ತಂಬಾಕು ಉತ್ಪನ್ನ ಸೇವನೆ ವಿರುದ್ಧ ಗುಲಾಬಿ ಆಂದೋಲನ

    ತರೀಕೆರೆ: ಅತಿಯಾದ ತಂಬಾಕು ಉತ್ಪನ್ನ ಬಳಕೆ ಮೃತ್ಯುವಿಗೆ ಆಹ್ವಾನ ನೀಡಿದಂತೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ಹೇಳಿದರು.

    ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ತಂಬಾಕು ಉತ್ಪನ್ನ ಬಳಕೆ ನಿಯಂತ್ರಿಸುವ ಸಲುವಾಗಿ ಆಯೋಜಿಸಿದ್ದ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
    ಗುಟ್ಖಾ ಸೇರಿ ಜಗಿಯುವ ತಂಬಾಕು ಉತ್ಪನ್ನಗಳಿಂದ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆ ಬಾಧಿಸಲಿವೆ. ಸಿಗರೇಟ್ ಸೇದುವ ಚಟದಿಂದ ಮುಕ್ತಿಗೊಳಿಸುವುದೇ ಕಾರ್ಯಕ್ರಮದ ಉದ್ದೇಶ ಎಂದರು.
    ಎಸಿ ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಯುವ ಜನತೆ ದುಶ್ಚಟಗಳ ದಾಸರಾಗುತ್ತಿದ್ದು, ಇದು ರಾಷ್ಟ್ರದ ಪ್ರಗತಿಗೆ ಹೊಡೆತ ಬೀಳಲಿದೆ. ಆರೋಗ್ಯ ಇಲಾಖೆಯಿಂದ ಆಯೋಜಿಸಿರುವ ಆಂದೋಲನ ಶ್ಲಾಘನೀಯ ಎಂದು ಹೇಳಿದರು.
    ಜಾಥಾದಲ್ಲಿ ಸಾಗಿದ ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್ ಅವರು ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ ಸಿಗರೇಟ್ ಮಾರಾಟ ಮತ್ತು ಸೇವನೆ ಮಾಡುತ್ತಿದ್ದವರಿಗೆ ಗುಲಾಬಿ ಹೂವು ನೀಡಿದರು. ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿದರು.
    ಬಿಇಒ ಬಿ.ಗೋವಿಂದಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಶಿವಪ್ಪ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts