More

    ರಾಜಸ್ಥಾನ ರಾಜಕೀಯ: ವಿಶ್ವಾಸಮತ ಯಾಚನೆಗೆ ಆಗ್ರಹಿಸಿದ ಪೈಲಟ್​ ಬೆಂಬಲಿಗರು

    ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಬಣಗಳ ಬಲ ಪ್ರದರ್ಶನಕ್ಕೆ ಪೈಪೋಟಿ ಶುರುವಾಗಿದೆ. ಈ ನಡುವೆ, ಗೆಹ್ಲೋಟ್​ ಸರ್ಕಾರ ವಿಶ್ವಾಸ ಮತ ಯಾಚಿಸಬೇಕು ಎಂದು ಸಚಿನ್ ಪೈಲಟ್​ ಬೆಂಬಲಿಗರು ಆಗ್ರಹಿಸಿದ್ದಾರೆ. ಇದರೊಂದಿಗೆ ಆಡಳಿತಾರೂಢ ಪಕ್ಷದೊಳಗಿನ ಭಿನ್ನಮತದ ಬಿಕ್ಕಟ್ಟು ಇನ್ನಷ್ಟು ಬಲವಾಗಿದೆ.

    ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಮೇಶ್​ ಮೀನಾ ವಿಶ್ವಾಸ ಮತ ಯಾಚನೆಯ ಆಗ್ರಹ ಮಾಡಿದ್ದು, ಗೆಹ್ಲೋಟ್ ಸರ್ಕಾರದ ಬೆಂಬಲಕ್ಕೆ ಎಷ್ಟು ಶಾಸಕರಿದ್ದಾರೆ ಎಂಬುದು ಸಾಬೀತಾಗಿ ಬಿಡಲಿ. ಗೆಹ್ಲೋಟ್ ಅವರು ಹೇಳುವಂತೆ 109 ಶಾಸಕರು ಅವರ ಬೆಂಬಲಕ್ಕೆ ಇದ್ದಾರೆ ಎಂದಾದರೆ ಅದೂ ಬಹಿರಂಗವಾಗಿಬಿಡಲಿ ಎಂದು ಹೇಳಿದ್ದಾರೆ. ಪೈಲಟ್​ ಬೆಂಬಲಿಗರ ಶಾಸಕರು ಸೋಮವಾರ ಮತ್ತು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ

    ಈ ನಡುವೆ, ಸೋಮವಾರವೇ ಕಾಂಗ್ರೆಸ್ ಶಾಸಕ ದೀಪೇಂದ್ರ ಸಿಂಗ್ ಶೇಖಾವತ್​ ಕೂಡ ವಿಶ್ವಾಸ ಮತ ಯಾಚಿಸುವಂತೆ ಗೆಹ್ಲೋಟ್ ಅವರನ್ನು ಆಗ್ರಹಿಸಿದ್ದರು. ಇದರೊಂದಿಗೆ ಗೆಹ್ಲೋಟ್​ ಸರ್ಕಾರ ವಿಶ್ವಾಸ ಮತಯಾಚಿಸಬೇಕೆಂಬ ಕೂಗಿಗೆ ಕೋರಸ್​ ಸೇರತೊಡಗಿದೆ. (ಏಜೆನ್ಸೀಸ್)

    ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts