More

    ಪಿಲಿಕುಳಕ್ಕೆ ಹೊಸ ಅತಿಥಿಗಳು

    ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ ಪಿಲಿಕುಳ ಮತ್ತು ಮೈಸೂರು ಮೃಗಾಲಯಗಳ ಒಡಂಬಡಿಕೆ ಪ್ರಕಾರ ತಮ್ಮಲ್ಲಿರುವ ಹೆಚ್ಚುವರಿ ಮೃಗಗಳನ್ನು ವಿನಿಮಯ ಮಾಡಿಕೊಂಡಿವೆ.
    ಅದರಂತೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ ಅಪರೂಪದ ನಾಲ್ಕು ಕಪ್ಪುಹಂಸಗಳು, ಎರಡು ಪಟ್ಟೆ ಹೈನಗಳು ಮತ್ತು ಎರಡು ಕಾಡುಕೋಣ ಮರಿಗಳು ಆಗಮಿಸಿವೆ. ಇದರಿಂದಾಗಿ ಪಿಲಿಕುಳದಲ್ಲಿ ಕಾಡುಕೋಣಗಳ ಸಂಖ್ಯೆ ನಾಲ್ಕಕ್ಕೇರಿದೆ. ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನು ನೀಡಲಾಗಿದೆ.

    ಕಪ್ಪು ಹಂಸ ವೀಕ್ಷಣೆಗೆ ಲಭ್ಯ: ಕಪ್ಪು ಹಂಸಗಳು ಈಗಾಗಲೇ ವಿಕ್ಷಣೆಗೆ ಲಭ್ಯವಿದೆ. ಹೈನಗಳು ಒಂದು ವಾರದ ನಂತರ ಸಂದರ್ಶಕರು ನೋಡಬಹುದಾಗಿದೆ. ಜತೆಗೆ ಶೀಘ್ರದಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಬಿಳಿ ಮತ್ತು ಕಂದು ರಿಯಾ ಪಕ್ಷಿಗಳು, ಎರಡು ಸ್ವೇಂಪ್ ಡೀರ್‌ಗಳು, ಒರ್ಯಂಟಾಲ್ ಡಾರ್ಟಾರ್ ಪಕ್ಷಿಗಳು, ಬಿಳಿ ಹುಲಿಗಳು ಆಗಮಿಸಲಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts