More

    ಕ್ರೀಡೆಯಿಂದ ದೈಹಿಕ ಸದೃಢತೆ

    ಕಡೂರು: ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ಬಿಜೆಪಿ ಮುಖಂಡ ದಾನಿ ಉಮೇಶ್ ಹೇಳಿದರು.
    ತಾಲೂಕಿನ ಹೋಚೀಹಳ್ಳಿ ಬೀರಲಿಂಗೇಶ್ವರ ಕ್ರಿಕೆಟ್ ಕ್ಲಬ್‌ಯಿಂದ ಬುಧವಾರ ಏರ್ಪಡಿಸಿದ್ದ ಹೋಚಿಹಳ್ಳಿ ಪ್ರೀಮಿಯರ್ ಲೀಗ್ -01 ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
    ಕಡೂರು ತಾಲೂಕು ಕ್ರೀಡಾಲೋಕಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಆಧಾರಸ್ತಂಭ ವೇದಾ ಕೃಷ್ಣಮೂರ್ತಿ ನಮ್ಮ ಕಡೂರಿನವರು ಎಂಬುದು ಹೆಮ್ಮೆಯ ಸಂಗತಿ ಎಂದರು.
    ಕ್ರೀಡೆಗಳು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾವಳಿಗಳು ಹೆಚ್ಚು ನಡೆಯಬೇಕು. ಇದರಿಂದ ಪರಸ್ಪರ ಬಾಂಧವ್ಯ ಹೆಚ್ಚುತ್ತದೆ. ಕ್ರಿಕೆಟ್ ಮಾತ್ರವಲ್ಲದೇ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಇತರೆ ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆಯಬೇಕು ಎಂದರು.
    ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ಗ್ರಾಮದ ಯುವಕರ ಸಂಘಟನೆಯೊಂದಿಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಶರಾವತಿ ಲಿಂಗರಾಜು, ರೇಣುಕಪ್ಪ, ಮಲ್ಲೇಶಪ್ಪ, ನಂಜುಂಡಪ್ಪ, ಲೋಕೇಶ್, ಶಾರದಮ್ಮ, ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts