More

    ಕೆಂಪ ನಂಜಮ್ಮಣ್ಣಿ ಗೌರವಾರ್ಥ ಫೋಟೋ ಶೂಟ್​

    ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡು ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ರಂಜನಿ ರಾವನ್​, ಇದೀಗ ಮೈಸೂರು ಮಹಾರಾಣಿಯಾಗಿದ್ದಾರೆ! ಹಾಗಂತ ಸಿನಿಮಾ ಅಥವಾ ಕಿರುತೆರೆಯಲ್ಲಿ ಅಂಥ ಪಾತ್ರ ಮಾಡುತ್ತಿಲ್ಲ. ಬದಲಿಗೆ ಮೈಸೂರು ಮಹಾರಾಣಿ ಕೆಂಪ ನಂಜಮ್ಮಣ್ಣಿ ಅವರ ಗೌರವಾರ್ಥ ವಿಶೇಷ ೋಟೋ ಶೂಟ್​ ಮಾಡಿಸಿದ್ದಾರೆ.

    ಜುಲೈ 7, ಮಹಾರಾಣಿ ಕೆಂಪ ನಂಜಮ್ಮಣ್ಣಿ ಅವರ ಪುಣ್ಯಸ್ಮರಣೆ. ಆ ದಿನದ ಪ್ರಯುಕ್ತ ಮೈಸೂರಿನ ರಾಣಿಯರು ತೊಡುತ್ತಿದ್ದ ಸೀರೆ ಮತ್ತು ಆಭರಣದ ಶೈಲಿಯಲ್ಲಿಯೇ ರಂಜನಿ ೋಟೋ ಶೂಟ್​ ಮಾಡಿಸಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ಅವರು, “ಕಳೆದ ಎರಡು ವರ್ಷದಿಂದ ನಾನು ೋಟೋಶೂಟ್​ ಮಾಡಿಸಿಲ್ಲ. ಸುಮ್ಮನೇ ಮಾಡಿಸುವ ಬದಲು ಒಂದೊಳ್ಳೆಯ ಉದ್ದೇಶದ ಹಿನ್ನೆಲೆಯನ್ನು ಪ್ರಧಾನವಾಗಿಸಿ ೋಟೋ ತೆಗೆಸಿದರಾಯಿತು ಎಂಬ ಆಲೋಚನೆ ಇತ್ತು. ಆಗ ಹೊಳೆದದ್ದೇ ಈ ಕಾನ್ಸೆಪ್ಟ್​. ಕೆಂಪ ನಂಜಮ್ಮಣ್ಣಿ ಅವರು ಆಗಿನ ಕಾಲದಲ್ಲಿ ತಮ್ಮ ಚಿನ್ನಾಭರಣಗಳನ್ನು ಮಾರಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಅವರ ಆ ಸೇವೆಯ ಗೌರವಾರ್ಥವಾಗಿ ಮೈಸೂರಿನ ರಾಣಿಯರ ಸೀರೆಯ ವೈಭವವನ್ನು ಈ ೋಟೋ ಶೂಟ್​ ಮೂಲಕ ತೋರಿಸಿದ್ದೇವೆ. ಮೈಸೂರು ಸಿಲ್ಕ್​, ಡಾಬು, ಆಭರಣ … ಹೀಗೆ ಆಗಿನ ಹೋಲಿಕೆಯನ್ನೇ ೋಟೋದಲ್ಲಿ ಕಾಣಬಹುದು’ ಎಂಬುದು ಅವರ ಮಾತು. ಇನ್ನು, ಮಹಾರಾಣಿಯ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಂಜನಿಗೆ ತೆರೆಮೇಲೆ ಐತಿಹಾಸಿಕ ಪಾತ್ರ ನಿರ್ವಹಿಸುವುದಕ್ಕೂ ಇಷ್ಟವಂತೆ. ಅವಕಾಶ ಸಿಕ್ಕರೆ ಪಾತ್ರಕ್ಕೆ ಜೀವ ತುಂಬುವುದಾಗಿ ಹೇಳಿದ್ದಾರೆ.

    ಸಿನಿಮಾ ಬಗ್ಗೆ ಹೇಳುವುದಾದರೆ, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಶೂಟಿಂಗ್​ ಬಹುತೇಕ ಮುಕ್ತಾಯವಾಗಿದೆ. ಹೊಸ ಕಥೆಗಳನ್ನೂ ಕೇಳುತ್ತಿದ್ದಾರೆ. “ಕನ್ನಡತಿ’ ಧಾರಾವಾಹಿಯಲ್ಲಿಯೂ ಬಿಜಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts