More

    ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಛಾಯಾಚಿತ್ರ ಪ್ರದರ್ಶನ 14ರಂದು

    ಶಿರಸಿ: ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಆಯ್ದ ಒಂದು ಸಾವಿರ ಛಾಯಾಚಿತ್ರಗಳ ಪ್ರದರ್ಶನವನ್ನು ಸೆ. 14ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ನಗರದ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಮಂಗಳವಾರ ಅರಣ್ಯವಾಸಿಗಳನ್ನ ಉದ್ದೇಶಿಸಿ ಅವರು ಮಾತನಾಡಿದರು.
    ಜಿಲ್ಲೆಯ 147 ಗ್ರಾಮ ಪಂಚಾಯಿತಿ ವ್ಯಾಪ್ತಿಯ 837 ಹಳ್ಳಿಗಳಲ್ಲಿ 41 ಸಾವಿರ ಕುಟುಂಬಗಳು 2 ಲಕ್ಷಕ್ಕೂ ಅಧಿಕ ಗಿಡ ನೆಟ್ಟಿರುವುದು ದಾಖಲೆಯಾಗಿದೆ. ಆಸಕ್ತ ಅರಣ್ಯವಾಸಿಗಳು ಸೆ. 14 ರಂದು ಬೆಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು.

    ಇಬ್ರಾಹಿಂ ಗೌಡಳ್ಳಿ, ನೆಹರೂ ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ ಬಂಡಲ, ಎಂ.ಆರ್. ನಾಯ್ಕ ಕಂಡ್ರಾಜಿ, ಬಾಬು ಮರಾಠಿ ಬಂಡಲ, ಎಂ.ಕೆ. ನಾಯ್ಕ, ಚಂದ್ರು ಶಾನಭಾಗ, ದುಗ್ಗು ಮರಾಠಿ, ಬಂಗರ‌್ಯ ಬಸ್ಯಾ ನಾಯ್ಕ, ಶ್ರೀಧರ ಕಂಡ್ರಾಜಿ, ದೇವೇಂದ್ರ ನಾಯ್ಕ, ಕೃಷ್ಣ ದೇವು ಮರಾಠಿ ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts