More

    ನಿಮಗೂ ಬಾಹ್ಯಾಕಾಶ ವಿದ್ಯಮಾನದ ಕುತೂಹಲ ಇದೆಯೇ? ಇಲ್ನೋಡಿ ಬೆರಗು ಮೂಡಿಸುವ ಬಣ್ಣದ ಚಿಟ್ಟೆ !

    ಬಾಹ್ಯಾಕಾಶದಲ್ಲಿ ನಡೆಯವ ವಿದ್ಯಮಾನವೆಂದರೆ ಅದು ಯಾವಾಗಲೂ ವಿಶೇಷ ಆಕರ್ಷಣೀಯ ಮತ್ತು ಕುತೂಹಲ ಕೆರಳಿಸುವಂಥದ್ದೇ ಆಗಿರುತ್ತದೆ.
    ಆಕಾಶ, ಸೂರ್ಯ, ಚಂದ್ರ, ನಕ್ಷತ್ರಪುಂಜ, ಉಪಗ್ರಹಗಳು, ಧೂಮಕೇತುಗಳು. ಗ್ರಹಣಗಳಿಗೆ ಸಂಬಂಧಿಸಿದಂತೆ ಬಾಹ್ಯಾಕಾಶದಲ್ಲಿ ನಡೆಯುವ ವಿಶೇಷ ವಿದ್ಯಮಾನವನ್ನು ಸದಾ ಅವಲೋಕಿಸುವ ಹವ್ಯಾಸವಿರುವ ಅಸಂಖ್ಯಾತ ನೆಟ್ಟಿಗರೂ ಇದ್ದಾರೆ.
    ಅಂಥವರಿಗೆ ಕುತೂಹಲ ತಣಿಸಲು ಎಂಬಂತೆ ಆಗಾಗ ಇಂಥ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಇಲ್ಲೂ ಒಂದು ಅಂಥ ವಿದ್ಯಮಾನ ನಡೆದಿದೆ ನೋಡಿ…
    ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್ಒ) ವೆರಿ ಲಾರ್ಜ್ ಟೆಲಿಸ್ಕೋಪ್ (ವಿಎಲ್‌ಟಿ) ಬಳಸಿ ಎನ್‌ಜಿಸಿ 2899 -ಚಿಟ್ಟೆಯನ್ನು ಹೋಲುವ ಅನಿಲದ ಗುಳ್ಳೆಯ ಒಂದು ಬೆರಗು ಮೂಡಿಸುವ ಚಿತ್ರವನ್ನು ಖಗೋಳಶಾಸ್ತ್ರಜ್ಞರು ಸೆರೆಹಿಡಿದಿದ್ದಾರೆ.
    ಗುಳ್ಳೆಯನ್ನು ಇಷ್ಟು ಸ್ಪಷ್ಟವಾಗಿ ಈ ಮೊದಲು ಎಂದೂ ಸೆರೆಹಿಡಿಯಲಾಗಿಲ್ಲ.
    ” ಸಮ್ಮಿತೀಯ ರಚನೆ, ಸುಂದರವಾದ ಬಣ್ಣ ಮತ್ತು ಸಂಕೀರ್ಣವಾದ ಮಾದರಿಗಳಿಂದ ಕೂಡಿದ ಅದು ಒಂದು ಸುಂದರ ಚಿಟ್ಟೆಯನ್ನು ಹೋಲುತ್ತದೆ.
    ಈ ಗಮನಾರ್ಹವಾದ ಅನಿಲದ ಗುಳ್ಳೆ, ಎನ್‌ಜಿಸಿ 2899, ನಮ್ಮ ವಿಎಲ್​ಟಿಯಿಂದ ಈ ಹೊಸ ಚಿತ್ರದಲ್ಲಿ ಆಕಾಶದಾದ್ಯಂತ ತೇಲುವಂತೆ ಮತ್ತು ಹಾರಾಡುತ್ತಿರುವಂತೆ ಕಾಣುತ್ತಿದೆ” ಎಂದು ಇಎಸ್​ಒ ಟ್ವೀಟ್ ಮಾಡಿದೆ.
    ಈ ಬಾಹ್ಯಾಕಾಶ ಚಿಟ್ಟೆ 3000 ರಿಂದ 6500 ಜ್ಯೋತಿರ್ವರ್ಷ ದೂರದಲ್ಲಿದೆ, ವೆಲಾದ ದಕ್ಷಿಣ ನಕ್ಷತ್ರಪುಂಜದಲ್ಲಿ ಇದನ್ನು ದಿ ಸೇಲ್ಸ್ ಎಂದೂ ಕರೆಯುತ್ತಾರೆ. ಈ ಅನಿಲ ಗುಳ್ಳೆಯ ಉಷ್ಣತೆ 10,000 ಡಿಗ್ರಿಗಳವರೆಗೆ ತಲುಪಬಹುದು.
    ಎರಡು ಕೇಂದ್ರ ನಕ್ಷತ್ರಗಳು ಅನಿಲದ ಹರಿವಿನಲ್ಲಿ ಕ್ರಿಯಾಶೀಲವಾದ ಪರಿಣಾಮವೇ ಈ ಬಾಹ್ಯಾಕಾಶ ಚಿಟ್ಟೆಯ ಸಮ್ಮಿತಿ (ಸಿಮೆಟ್ರಿ)ರಚನೆಯಾಗಿದೆ ಎಂದು ನಂಬಲಾಗಿದೆ. “ಒಂದು ನಕ್ಷತ್ರವು ತನ್ನ ಜೀವನದ ಅಂತ್ಯವನ್ನು ತಲುಪಿದ ನಂತರ ಮತ್ತು ಅದರ ಹೊರಗಿನ ಪದರಗಳನ್ನು ಹೊರಹಾಕಿದ ನಂತರ, ಇನ್ನೊಂದು ನಕ್ಷತ್ರವು ಅನಿಲದ ಹರಿವಿಗೆ ಅಡ್ಡಿಪಡಿಸುತ್ತದೆ, ಎರಡು-ಹಾಲೆಗಳ ಆಕಾರವನ್ನು (ಇಲ್ಲಿ ಕಂಡುಬರುವ) ರೂಪಿಸುತ್ತದೆ” ಎಂದು ಇಎಸ್ಒ ಹೇಳಿದೆ.
    ‘ಬಾಹ್ಯಾಕಾಶ ಚಿಟ್ಟೆ’ ವಿದ್ಯಮಾನವನ್ನು ಚಿಲಿಯ ವಿಎಲ್‌ಟಿ (ಫೋಕಲ್ ರಿಡ್ಯೂಸರ್ ಮತ್ತು ಕಡಿಮೆ ಪ್ರಸರಣ ಸ್ಪೆಕ್ಟ್ರೋಗ್ರಾಫ್ (ಎಫ್‌ಒಆರ್​​ಎಸ್) ದೂರದರ್ಶಕ) ಸೆರೆಹಿಡಿದಿದೆ, ವಿಆರ್‌ಟಿಯನ್ನು ರೂಪಿಸುವ ನಾಲ್ಕು ದೂರದರ್ಶಕಗಳಲ್ಲಿ FORS ಒಂದಾಗಿದ್ದು, ಇದು 8.2 ಮೀಟರ್ ಉದ್ದವಿರುತ್ತದೆ.
    ಬಾಹ್ಯಾಕಾಶ ಚಿಟ್ಟೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts