More

    ಫಾಲ್ಕೆ ಪ್ರಶಸ್ತಿ ಪಡೆದ ರಜನೀಕಾಂತ್;​ ಕರ್ನಾಟಕ ಸಾರಿಗೆ ಬಸ್​ ಚಾಲಕನ್ನನ್ನು ನೆನೆದರು!

    ನವದೆಹಲಿ: ಸೂಪರ್​ಸ್ಟಾರ್​ ರಜನೀಕಾಂತ್​ಗೆ ಇಂದು ನವದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ, ತಮ್ಮೊಳಗಿನ ನಟನನ್ನು ಗುರುತಿಸಿದ್ದಕ್ಕಾಗಿ, ಕರ್ನಾಟಕ ಸಾರಿಗೆ ಬಸ್​ ಚಾಲಕರಾಗಿದ್ದ ತಮ್ಮ ಆಪ್ತ ಸ್ನೇಹಿತನನ್ನು ರಜನಿ ಸ್ಮರಿಸಿದರು.

    2020ರ ಏಪ್ರಿಲ್​​ನಲ್ಲಿ ರಜನೀಕಾಂತ್​ಗೆ 2019ನೇ ಸಾಲಿನ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿತ್ತು. ಕರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿಳಂಬವಾಗಿ ಇಂದು ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದರು. ಬಿಳಿಯ ಕುರ್ತಾ-ಪೈಜಾಮ ಧರಿಸಿ ಭಾಗವಹಿಸಿದ ರಜನಿಕಾಂತ್​, ಪ್ರಶಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ, ತಮ್ಮೊಂದಿಗೆ ಸಿನಿಮಾ ಮಾಡಿದ ಎಲ್ಲಾ ನಿರ್ದೇಶಕರೂ, ನಿರ್ಮಾಪಕರು, ಚಿತ್ರತಂಡ ಮತ್ತು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

    ಇದನ್ನೂ ಓದಿ: ಆದಾಯ ಡಬಲ್​ ಮಾಡ್ತೀವಿ ಅಂದ್ರು, ಮಾಡಿದ್ದೇ ಬೇರೆ: ಬಿಜೆಪಿಗೆ ವಿಪಕ್ಷ ನಾಯಕನ​ ಟಾಂಗ್​

    “ನನ್ನ ಮಾರ್ಗದರ್ಶಕ ಮತ್ತು ಗುರು ಕೆ.ಬಾಲಚಂದರ್​ ಸರ್​ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನಲ್ಲಿ ಉನ್ನತ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ತುಂಬಿದ ನನ್ನ ಸೋದರ ಸತ್ಯನಾರಾಯಣ ಗಾಯಕ್​ವಾಡ್​ ಅವರನ್ನು ನೆನೆಯುತ್ತೇನೆ. ಬಸ್​ ಚಾಲಕನಾಗಿದ್ದ ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್​ ಬಹದೂರ್​ಗೆ ನನ್ನ ಧನ್ಯವಾದ. ನಾನು ಬಸ್​ ಕಂಡಕ್ಟರ್​ ಆಗಿದ್ದಾಗ, ಅವನೇ ನನ್ನೊಳಗಿನ ನಟನನ್ನು ಗುರುತಿಸಿದ್ದು, ಸಿನಿಮಾ ಸೇರುವಂತೆ ಪ್ರೋತ್ಸಾಹಿಸಿದ್ದು…” ಎಂದು ರಜನೀಕಾಂತ್​ ಹೇಳಿದರು.

    ರಜನೀಕಾಂತ್​ ಮಾಡಿದ ಮೊದಲ ಚಿತ್ರವೆಂದರೆ 1975 ರಲ್ಲಿ ಕೆ.ಬಾಲಚಂದರ್​ ನಿರ್ದೇಶಿಸಿದ ಅಪೂರ್ವ ರಾಗಂಗಳ್​. ನಾಲ್ಕು ದಶಕಗಳಿಂದ ತಮಿಳು ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಅವರು ಸುಮಾರು 160 ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನವೆಂಬರ್​ 4 ರಂದು ಅವರ ನೂತನ ಚಿತ್ರ ‘ಅಣ್ಣಾತ್ತೆ’ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

    VIDEO| ‘ಮುಗಿಲ್​ಪೇಟೆ’ ಚಿತ್ರದಲ್ಲಿ ‘ಪ್ರೇಮಲೋಕ’ದ ರಸಮಯ ದೃಶ್ಯ!

    ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts