More

    ಪೆಟ್ರೋಲ್​, ಡೀಸೆಲ್​ ಮಾರಾಟ ಮೊದಲಿನಂತಾಗಲು ಇನ್ನಾರು ತಿಂಗಳು ಬೇಕು…!

    ನವದೆಹಲಿ: ಭಾರತ ಜಗತ್ತಿನಲ್ಲಿ ತೈಲ ಖರೀದಿಯಲ್ಲಿ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಹೀಗಾಗಿ ಜಾಗತಿಕ ತೈಲ ಬೆಲೆ ನಿಗದಿಯಲ್ಲಿ ಭಾರತದ ಬೇಡಿಕೆ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ಕಳೆದ ಏಪ್ರಿಲ್​ನಲ್ಲಿ ಒಂದು ಹಂತದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಮಾರಾಟ ಶೇ.70ಕ್ಕಿಂತಲೂ ಕಡಿಮೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈಗಲೂ ಪೆಟ್ರೋಲ್​ ಮಾರಾಟ ಶೇ.47ಕ್ಕಿಂತ ಕಡಿಮೆಯಾಗಿದೆ. ಜತೆಗೆ, ಡೀಸೆಲ್​ ಬಳಕೆ ಶೇ.35ರಷ್ಟು ಕಡಿಮೆಯಾಗಿದೆ.

    ತೈಲೋತ್ಪನ್ನಗಳ ಮಾರಾಟ ಹಿಂದಿನಂತಾಗಲು ಇನ್ನು ಕನಿಷ್ಠ ಆರು ತಿಂಗಳಾದರೂ ಬೇಕು ಎನ್ನುವುದು ತಜ್ಞರ ಲೆಕ್ಕಾಚಾರ. ಇನ್ನೆರಡು ತಿಂಗಳಲ್ಲಿ ಶೇ.8ರಷ್ಟು ಮಾರಾಟ ವೃದ್ಧಿಯಾದರೂ ಹಿಂದಿನ ಮಟ್ಟಕ್ಕೆ ತಲುಪಲು ಹೆಚ್ಚು ಕಾಲ ಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಇದನ್ನೂ ಓದಿ; ‘ಫೇಸ್​ಬುಕ್​ ಶಾಪ್ಸ್​’ನಲ್ಲಿ Buy ಗೆ ಮಾರ್ಪಾಡಾಗುತ್ತೆ Like; ಆನ್​ಲೈನ್​ ಶಾಪಿಂಗ್​ನಲ್ಲಿ ಅಮೆಜಾನ್​ ವಿರುದ್ಧ ಸೆಣಸು

    ಎರಡು ತಿಂಗಳ ಲಾಕ್​ಡೌನ್​ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳಿಗೆ ಬೇಡಿಕೆಯೇ ಇರಲಿಲ್ಲ. ಈ ಬೇಡಿಕೆ ಮತ್ತೆ ಕುದುರಲು ಸಾಕಷ್ಟು ಸಮಯಾವಕಾಶ ಬೇಕು. ಚೀನಾದಲ್ಲಿ ಲಾಕ್​ಡೌನ್​ ತೆರವು ಬಳಿಕ ಬಳಕೆ ಪ್ರಮಾಣ ಹಿಂದಿನ ಸ್ಥಿತಿಗೆ ತಲುಪಿದೆ. ಆದರೆ, ಭಾರತದಲ್ಲಿ ಹಾಗಾಗುತ್ತಿಲ್ಲ. ಸದ್ಯ ಶೇ.40 ಬಳಕೆಯಾಗುತ್ತಿದೆ. ಕೆಲ ತಿಂಗಳಲ್ಲಿಯೇ ಬಳಕೆ ಹೆಚ್ಚಾಗುವ ನಿರೀಕ್ಷೆಯೊಂದಿಗೆ ಪಾತಾಳ ಕಂಡಿದ್ದ ಜಾಗತಿಕ ತೈಲ ಬೆಲೆ ಸದ್ಯ ಪ್ರತಿ ಬ್ಯಾರೆಲ್​ಗೆ 35 ಡಾಲರ್​ಗೆ ಏರಿಕೆಯಾಗಿದೆ.

    ಸಾಮಾನ್ಯ ತೈಲ ಬೇಡಿಕೆಯ ಶೇ.60-70ಕ್ಕೆ ತೈಲ ಮಾರಾಟ ತಲುಪುತ್ತಿದೆ. ಕೋವಿಡ್​ಗೂ ಮುಂಚೆ ಇದ್ದ ಸ್ಥಿತಿಗೆ ಮುಟ್ಟಲು ಕಾಲಾವಕಾಶ ಬೇಕಾಗುತ್ತದೆ. ಇನ್ನೆರಡು ತಿಂಗಳಲ್ಲಿ ಶೇ.80ಕ್ಕೆ ತಲುಪಬಹುದು. ಆದರಾಚೆಗೆ ಬೇಡಿಕೆ ಉಂಟಾಗುವುದು ಕಷ್ಟಸಾಧ್ಯವಾಗಲಿದೆ ಎಂದು ಹಿಂದುಸ್ಥಾನ್​ ಪೆಟ್ರೋಲಿಯಂ ಅಧ್ಯಕ್ಷ ಮುಖೇಶ್​ಕುಮಾರ್​ ಸುರಾನಾ ಹೇಳುತ್ತಾರೆ.

    ಇದನ್ನೂ ಓದಿ; ನರ್ಸರಿ ಮಕ್ಕಳ ಗತಿಯೇನು? ಶಾಲಾರಂಭ ವಿಳಂಬವಾದರೂ ಪೂರ್ತಿ ಶುಲ್ಕ ನೀಡಬೇಕೇ?

    ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ ಒಟ್ಟಾರೆ ಪ್ರತಿದಿನ 4.6 ದಶಲಕ್ಷ ಬ್ಯಾರೆಲ್​ ತೈಲ ಬಳಕೆಯಾಗುತ್ತಿತ್ತು. ಈ ಬಾರಿ ಅದರ ಪ್ರಮಾಣ 2.6 ದಶಲಕ್ಷ ಬ್ಯಾರೆಲ್​ ಆಗಿದೆ. ಪೆಟ್ರೋಲ್​ ಬಳಕೆ ಶೇ.47ರಷ್ಟು ಕಡಿಮೆಯಾಗಿದ್ದರೆ, ಡೀಸೆಲ್​ ಬಳಕೆ ಪ್ರಮಾಣ ಶೇ.35 ಕಡಿಮೆಯಾಗಿದೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತವೆ. ವಿಮಾನ ಇಂಧನ ಬಳಕೆ ಶೇ.85ಕ್ಕೂ ಕಡಿಮೆಯಾಗಿದೆ.

    ಆದರೆ, ಏಪ್ರಿಲ್​ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಇಂಧನ ಬಳಕೆ ಶೇ.75 ಹೆಚ್ಚಾಗಿರುವುದು ಕೂಡ ಆಶಾದಾಯಕ ಬೆಳವಣಿಗೆ ವಾಹನ ಸಂಚಾರದ ಮೇಲಿದ್ದ ನಿರ್ಬಂಧ ತೆರವು, ಸರಕು ಸಾಗಣೆ, ಪ್ರಯಾಣಿಕ ವಾಹನ ಸಂಚಾರ ಶುರುವಾಗಿದ್ದರಿಂದ ತೈಲ ಬಳಕೆ ಹೆಚ್ಚಾಗುತ್ತಿದೆ ಎಂದು ಬಂಕ್​ ಮಾಲೀಕರು ಹೇಳುತ್ತಾರೆ.

    ಬೇಬಿ ಪೌಡರ್​ನಿಂದ ಕ್ಯಾನ್ಸರ್​ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್​ಸನ್​ ಆ್ಯಂಡ್​ ಜಾನ್​ಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts