More

    ಪೆಟ್ರೋಲ್ ಬೆಲೆ ಗಗನಕ್ಕೆ: ಅಮಿತಾಬ್, ಅಕ್ಷಯ್​ರನ್ನು ಎಳೆದು ತಂದ ಕಾಂಗ್ರೆಸ್

    ಮುಂಬೈ: ದೇಶದಲ್ಲಿ ಪೆಟ್ರೋಲ್ ದರ ರೂ 100 ಗಡಿ ದಾಟುವ ಎಲ್ಲ ಲಕ್ಷಣ ಕಾಣುತ್ತಿದೆ. ಈಗಾಗಲೇ ರಾಜಸ್ತಾನದಲ್ಲಿ ದಾಟಿಯಾಗಿದೆ. ದೇಶದ ಬಹುತೇಕ ಕಡೆ ರು 92 ವರೆಗೆ ಪೆಟ್ರೋಲ್ ಮಾರಾಟವಾಗುತ್ತಿದೆ. ಡಿಸೇಲ್ ಬೆಲೆಯೂ ಏರುತ್ತಿದೆ, ಗ್ಯಾಸ ಬೆಲೆಯೂ ಏರುತ್ತಿದೆ.

    ಇಂದು ಈ ಬೆಲೆ ಏರಿಕೆ ವಿರುದ್ಧ ಕೆಂಡ ಕಾರಿರುವ ಮಹಾರಾಷ್ಟ್ರ ಕಾಂಗ್ರೆಸ್ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಅವರನ್ನು ಎಳೆ ತಂದಿದೆ. ಈ ಕುರಿತು ಆಕ್ರೋಶ ಹೊರಹಾಕಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ನಾನಾ ಪಾಟೋಳೆ ಅವರು, ಪೆಟ್ರೋಲ್ ಬೆಲೆ 100 ರೂಪಾಯಿ ದಾಟುತ್ತಿದ್ದರೂ ಯುಪಿಎ ಸರ್ಕಾರವಿದ್ದಾಗ ಆಕ್ರೋಶ ಹೊರ ಹಾಕಿದ್ದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಮನಮೋಹನ್ ಸಿಂಗ್ ಸರ್ಕಾರವಿದ್ದಾಗ 2012 ರಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳದ ಬಗ್ಗೆ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯಕುಮಾರ್ ಅವರು ಮಾಡಿದ್ದ ಟ್ವೀಟ್ ಹಂಚಿಕೊಂಡಿರುವ ನಾನಾ, 100 ರೂ ವರೆಗೆ ಪೆಟ್ರೋಲ್ ಮಾರಾಟವಾಗುತ್ತಿದದ್ರೂ ಈಗೇಕೆ ಇವರು ಬಾಯಿ ಮುಚ್ಚಿಕೊಂಡಿದ್ದಾರೆ. ಇವರ ಮೇಲೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದ್ದಾರೆ.

    ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಕಚ್ಚಾ ತೈಲ ಬೆಲೆ ವಿಪರೀತ ಹೆಚ್ಚಳವಾಗಿತ್ತು. ಆದರು ಸಿಂಗ್ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಈಗ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿದಿದ್ದರೂ ಏಕೆ ಬೆಲೆ ಈ ಪ್ರಮಾಣದಲ್ಲಿ ಏರಿದೆ. ಜನಸಾಮಾನ್ಯರ ಟಿಕೆಟ್ ದುಡ್ಡಿನಿಂದ ಬದುಕುವ ಈ ನಟರು ಏಕೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ನಾನಾ ಪ್ರಶ್ನಿಸಿದ್ದಾರೆ.

    ಅಲ್ಲದೇ ಅಕ್ಷಯ್ ಹಾಗೂ ಅಮಿತಾಬ್ ಅವರ ಈ ಇಬ್ಬಗೆಯ ನೀತಿ ಖಂಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಈ ಇಬ್ಬರೂ ನಟರ ಚಿತ್ರಗಳ ಶೂಟಿಂಗ್​ಗೆ ಮಹಾರಾಷ್ಟ್ರದಲ್ಲಿ ಅವಕಾಶ ನೀಡಲ್ಲ ಎಂದು ಪಾಟೋಲೆ ಎಚ್ಚರಿಸಿದ್ದಾರೆ.

    ಪೆಟ್ರೋಲ್ ದರ 100 ರತ್ತ: ಪ್ರಧಾನಿ ಮೋದಿ ಏನಂದ್ರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts