ಮುಧೋಳ: ರಾಜ್ಯದಲ್ಲಿ ಮುಸ್ಲಿಂ ಸಮಾಜದ ಗುರುವಿನ ಸ್ಥಾನದಲ್ಲಿರುವ ಮುಲ್ಲಾ ಸಮಾಜದವರು ಆರ್ಥಿಕವಾಗಿ ಹಿಂದುಳಿದಿದ್ದು, ಅವರ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಹಾಗೂ ಸಮಾಜ ಅಭಿವೃದ್ಧಿಗಾಗಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮುಲ್ಲಾ ಅಸೋಸಿಯೇಷನ್ ತಾಲೂಕು ಘಟಕದ ಸಂಚಾಲಕ ಕುತುಬುದ್ದೀನ್ ಮುಲ್ಲಾ ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ಮೇಲೆ ನಿಗಮ ಸ್ಥಾಪನೆಗಾಗಿ ಒತ್ತಡ ಹೇರಲು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುತ್ತಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ಮುಲ್ಲಾ ಸಮಾಜದ ಅಧ್ಯಕ್ಷ ಜಮೀರ ಮುಲ್ಲಾ, ಅಲ್ಲಾಭಕ್ಷ ಮುಲ್ಲಾ, ಮಹಿಬೂಬ್ ಮುಲ್ಲಾ, ದಾವಲ್‌ಸಾಬ ಮುಲ್ಲಾ, ಶಬ್ಬಿರ ಮುಲ್ಲಾ, ಅಜೀಂ ಮುಲ್ಲಾ, ಮುನ್ನಾ ಮುಲ್ಲಾ, ಬಂದೇ ನವಾಜ್ ಮುಲ್ಲಾ ಇತರರಿದ್ದರು.