More

    ಕಿಂಡಿ ಅಣೆಕಟ್ಟಿನಲ್ಲಿ ಜಲಧಾರೆ

    ಪುತ್ತೂರು: ಗೌರಿ ಹೊಳೆಗೆ ಪೆರುವಾಜೆ ಗ್ರಾಮದ ಚೆನ್ನಾವರದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲಿ ಭರಪೂರ ನೀರು ತುಂಬಿ ಜಲಧಾರೆ ಸೃಷ್ಟಿಯಾಗಿದೆ. ಹಲವು ಕಿ.ಮೀ. ದೂರದ ತನಕ ಕೃಷಿ ಭೂಮಿ ಜತೆಗೆ ಅಂತರ್ಜಲ ಹೆಚ್ಚಳಕ್ಕೂ ಈ ಅಣೆಕಟ್ಟು ಸಹಕಾರಿಯಾಗಿದೆ. ಕಳೆದ ಬಾರಿ ನೀರು ಸಂಗ್ರಹದಿಂದ ಸುತ್ತಮುತ್ತಲಿನ ಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಗೌರಿ ಹೊಳೆಗೆ ಚೆನ್ನಾವರ- ಕುಂಡಡ್ಕ ಸಂಪರ್ಕ ಸೇತುವೆ ಬಳಿಯಿಂದ ಕೆೆಲ ಮೀಟರ್ ದೂರದಲ್ಲಿ ಈ ಕಿಂಡಿ ಅಣೆಕಟ್ಟು ಇದೆ. ಎರಡು ವಾರದ ಹಿಂದೆ ಹಲಗೆ ಅಳವಡಿಸಲಾಗಿದೆ. ಕಟ್ಟದಲ್ಲಿ ನೀರು ಸಂಗ್ರಹಗೊಂಡು ಹಲಗೆಯ ಮೇಲ್ಭಾಗದಿಂದ ಹೆಚ್ಚುವರಿ ನೀರು ಉಕ್ಕಿ ಕೆಳಭಾಗಕ್ಕೆ ಹರಿಯುತ್ತಿದೆ. ಇದರಿಂದ ಕಿಂಡಿ ಕಟ್ಟದ ನೀರು ತುಂಬಿರುವ ಕೃಷಿ ಪ್ರದೇಶದ ಜತೆಗೆ ಹೊಳೆಯ ಕೆಳಭಾಗದ ಪ್ರದೇಶದ ಕೃಷಿ ಭೂಮಿಗೂ ಅನುಕೂಲವಾಗಿದೆ.

    ಮೇ ತಿಂಗಳ ತನಕ ನೀರಿನ ಸಂಗ್ರಹ
    ಕಳೆದ ವರ್ಷ ಮೇ ಅಂತ್ಯದ ತನಕ ಕಟ್ಟದಲ್ಲಿ ನೀರು ಸಂಗ್ರಹವಿತ್ತು. ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಹಲಗೆ ಜೋಡಿಸಿದ ಪರಿಣಾಮ ಮೇ ತಿಂಗಳ ತನಕ ನೀರಿನ ಸಂಗ್ರಹವಿರುವ ನಿರೀಕ್ಷೆ ಇದೆ. ಚೆನ್ನಾವರ, ಕನ್ನೆಜಾಲು ಪರಿಸರದಲ್ಲಿನ ಕೃಷಿ ತೋಟಗಳಿಗೆ ಈ ಅಣೆಕಟ್ಟು ಸಾಕಷ್ಟು ಪ್ರಯೋಜನ ತಂದಿದೆ ಎಂದು ಸ್ಥಳೀಯ ನಿವಾಸಿ ಇಕ್ಭಾಲ್ ಚೆನ್ನಾವರ ವಿಜಯವಾಣಿಗೆ ತಿಳಿಸಿದ್ದಾರೆ.

    ಸಾರ್ವಜನಿಕರಿಗೆ ನಿರ್ಬಂಧ: ಅಣೆಕಟ್ಟು ತುಂಬಿ ಹಲಗೆಯ ಮೇಲ್ಭಾಗದಿಂದ ನೀರು ಹರಿಯುತ್ತಿರುವ ದೃಶ್ಯ ಮಿನಿ ಜಲಪಾತದಂತೆ ಕಾಣುತ್ತಿದೆ. ತಡೆಗೋಡೆ ಮೇಲ್ಭಾಗದಿಂದಲೂ ನೀರು ಹರಿಯುತ್ತಿದೆ. ಕುಂಡಡ್ಕ- ಚೆನ್ನಾವರ ಸಂಪರ್ಕ ರಸ್ತೆ ಸನಿಹದಲ್ಲಿಯೇ ಈ ಕಟ್ಟ ಇದ್ದು, ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟಿನ ಮೇಲ್ಭಾಗಕ್ಕೆ ಸಾರ್ವಜನಿಕರು ತೆರಳದಂತೆ ನಿರ್ಬಂಧ ಹೇರಲಾಗಿದೆ.

    35 ಲಕ್ಷ ರೂ.ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು: ಎರಡು ವರ್ಷದ ಹಿಂದೆ ಶಾಸಕ ಅಂಗಾರ ಅವರ ಶಿಾರಸ್ಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯ 35 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. 2018 ರಲ್ಲಿ ಕಾಮಗಾರಿ ಆರಂಭಗೊಂಡು 2019 ರಲ್ಲಿ ಮುಕ್ತಾಯಗೊಂಡಿತು. ಜಿಪಂನಿಂದ ಹೆಚ್ಚುವರಿ ಹಲಗೆ ಒದಗಿಸಿಕೊಡಲು ಜಿಪಂ ಸದಸ್ಯ ಎಸ್.ಎನ್.ಮನ್ಮಥ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts