More

    ಆಟೋಟಗಳಿಂದ ವ್ಯಕ್ತಿತ್ವ ವೃದ್ಧಿ

    ಆನಂದಪುರ: ಕ್ರೀಡೆ ಶಿಕ್ಷಣದ ಒಂದು ಭಾಗ. ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಮನೋಭಾವ ಇದರಿಂದ ಹೆಚ್ಚಾಗಿ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಎಂದು ಇರುವಕ್ಕಿ ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

    ಸಮೀಪದ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿವಿ ಆವರಣದಲ್ಲಿ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಶಿವಶಂಕರ ಮಾತನಾಡಿದರು. ಕುಲಸಚಿವ ಡಾ. ಕೆ.ಸಿ.ಶಶಿಧರ, ಪೊನ್ನಂಪೇಟೆಯ ಡಾ. ಜಿ.ಎಂ.ದೇವಗಿರಿ, ಶಿವಮೊಗ್ಗ ಕೆವಿಕೆ ಹಿರಿಯ ವಿಜ್ಞಾನಿ ಡಾ. ಜಿ.ಕೆ.ಗಿರಿಜೇಶ್, ಡಾ. ಆರ್.ಗಣೇಶ ನಾಯಕ್ ಇತರರಿದ್ದರು.
    ಮೂರು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಇರುವಕ್ಕಿಯ ಕೃಷಿ ಮಹಾವಿದ್ಯಾಲಯ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ, ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯ, ನವುಲೆಯ ಕೃಷಿ ಮಹಾ ವಿದ್ಯಾಲಯ ಹೀಗೆ ವಿವಿಧ ಮಹಾ ವಿದ್ಯಾಲಯಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು, ಬೋಧಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts