ಉಕ್ರೇನಿಯನ್​ ವಿಮಾನಕ್ಕೆ ಕ್ಷಿಪಣಿ ಅಪ್ಪಳಿಸಿದ ವಿಡಿಯೋ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಇರಾನ್​ ಸೇನೆ!

blank

ದುಬೈ: ಉಕ್ರೇನಿಯನ್​ ವಿಮಾನಕ್ಕೆ ಕ್ಷಿಪಣಿ ಅಪ್ಪಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ವ್ಯಕ್ತಿಯೊಬ್ಬನನ್ನು ಇರಾನ್​ ಸೇನಾ ಪಡೆಯ ಎಲೈಟ್​ ರೆವಲ್ಯೂಷನರಿ ಗಾರ್ಡ್ಸ್ ವಶಕ್ಕೆ ಪಡೆದಿರುವುದಾಗಿ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ತನಿಖೆಯ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮುಂದೆ ಪ್ರಸ್ತುತ ಪಡಿಸುವುದಾಗಿ ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಎಲೈಟ್​ ರೆವಲ್ಯೂಷನರಿ ಗಾರ್ಡ್ಸ್ ನಿರಾಕರಿಸಿದೆ.

ವಿಮಾನ ದುರಂತದ ಹೊಣೆಯನ್ನು ಎಲೈಟ್​ ರೆವಲ್ಯೂಷನರಿ ಗಾರ್ಡ್ಸ್ ಹೊತ್ತುಕೊಂಡಿದೆ. ಅಮೆರಿಕ ಸೇನಾ ವಿಮಾನ ಎಂದು ತಪ್ಪಾಗಿ ಗ್ರಹಿಸಿ ಸಿಬ್ಬಂದಿ ಸೇರಿ 176 ಮಂದಿ ಪ್ರಯಾಣಿಕರಿದ್ದ ಉಕ್ರೇನ್​ ಪ್ರಯಾಣಿಕರನ್ನು ಹೊಡೆದುರುಳಿಸಿದೆ. ಈ ಬಗ್ಗೆ ಇರಾನ್​ ಕ್ಷಮೆಯನ್ನು ಯಾಚಿಸಿ, ಇದಕ್ಕೆ ಕಾರಣ ಅಮೆರಿಕ ಸೃಷ್ಟಿಸಿದ ಬಿಕ್ಕಟ್ಟು ಎಂದು ಆರೋಪ ಮಾಡಿದೆ.

ಘಟನೆ ಹಿನ್ನೆಲೆ
ಬೋಯಿಂಗ್ 737 ಸರಣಿಯ ಉಕ್ರೇನಿಯನ್​ ವಿಮಾನ ಕಳೆದ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣಾವಾಗಿ ಸಾವಿಗೀಡಾಗಿದ್ದರು. (ಏಜೆನ್ಸೀಸ್​)

Share This Article

ಬೇಸಿಗೆಯಲ್ಲಿ ಬಿಸಿ ಕಾಫಿ ಅಥವಾ ಕೋಲ್ಡ್ ಕಾಫಿ, ಯಾವುದು ಆರೋಗ್ಯಕ್ಕೆ ಒಳ್ಳೆಯದು? Hot Coffee OR Cold Coffee

Hot Coffee OR Cold Coffee: ಕಾಫಿ ಪ್ರಪಂಚದಲ್ಲೇ ಅತ್ಯಂತ ಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಕೆಲವು…

ಶನಿವಾರ ಈ ತಪ್ಪುಗಳನ್ನು ಮಾಡಬೇಡಿ! ಬಡತನವನ್ನು ಆಹ್ವಾನಿಸಿದಂತೆ… Avoid These Mistakes On Saturday

Avoid These Mistakes On Saturday: ಶನಿವಾರದಂದು ಮಾಡುವ ಸಣ್ಣ ತಪ್ಪುಗಳು ಅನೇಕ ರೀತಿಯ ತೊಂದರೆಗಳಿಗೆ…

ಮದ್ವೆ ನಂತರ ಪುರುಷರಿಗೆ ಬೊಜ್ಜಿನ ಸಮಸ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ? Post Marriage Weight Gain In Men

Post Marriage Weight Gain In Men: ಮದುವೆಯ ನಂತರ ಪುರುಷರು ಮತ್ತು ಮಹಿಳೆಯರಲ್ಲಿ ಅನೇಕ…