More

    ಸತತ ಅಧ್ಯಯನದಿಂದ ಕಲಿಕಾ ಜೀವನ ಯಶಸ್ವಿ

    ಹುಕ್ಕೇರಿ: ವಿದ್ಯಾರ್ಥಿ ಜೀವನದಲ್ಲಿ ಸತತ ಅಧ್ಯಯನ ನಡೆಸಬೇಕು. ಆಗ ಮಾತ್ರ ಕಲಿಕಾ ಜೀವನ ಯಶಸ್ವಿಯಾಗುತ್ತದೆ ಎಂದು ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಿ.ವಿ.ಗೋಟಿ ಹೇಳಿದರು.

    ತಾಲೂಕಿನ ಬೆಲ್ಲದ ಬಾಗೇವಾಡಿಯ ವಿ.ಎಂ ಕತ್ತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸದಲಗಾ ಸರ್ಕಾರಿ ಕಾಲೇಜಿನ ಉಪನ್ಯಾಸಕ ವೀರೇಶ ಪಾಟೀಲ ಮಾತನಾಡಿ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೋಹ ಬಿಟ್ಟು ವಿದ್ಯಾರ್ಥಿಗಳಲ್ಲಿ ಅಧ್ಯಯನದ ಗುರಿ ಮಾತ್ರ ಇರಬೇಕೆಂದರು.

    ಪ್ರಾಚಾರ್ಯ ಎಸ್.ಎಂ.ಭಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ಹಂತಕ್ಕೆ ಹೆಬ್ಬಾಗಿಲು ಪಿಯುಸಿ ಹಂತ. ಉತ್ತಮ ಅಂಕ ಗಳಿಸಿದಾಗ ಮಾತ್ರ ಭವಿಷ್ಯಕ್ಕೆ ಬೇಕಾದ ಪದವಿ ಪಡೆಯಲು ಸಾಧ್ಯ ಎಂದರು. ಪದವಿ ಕಾಲೇಜ್ ಪ್ರಾಚಾರ್ಯ ವಿ.ಎಸ್.ಹೂಗಾರ, ಪ್ರೌಢ ವಿಭಾಗದ ಮುಖ್ಯಶಿಕ್ಷಕ ಎನ್.ಎಸ್.ಪತ್ತಾರ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎ.ಎಸ್. ಕಾಳಗೆ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಎಸ್.ಡಿ.ಬೆಳ್ಳಿಕಟ್ಟಿ, ಐಟಿಐ ಪ್ರಾಚಾರ್ಯ ವಿ.ಡಿ.ತೋರೊ, ಆರ್.ವಿ.ಕತ್ತಿ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ವಿ.ಬಿ. ಕಮತೆ ಇತರರು ಇದ್ದರು. ಆರ್. ಜಿ.ಆನಿಕಿವಿ ಸ್ವಾಗತಿಸಿದರು. ಸುಷ್ಮಾ ಪಾಟೀಲ, ಜಯಶ್ರೀ ಚನ್ನಿ ನಿರೂಪಿಸಿದರು. ಆರ್.ಎಂ.ಕಾಂಬಳೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts