More

    ಶಾಶ್ವತ ತಡೆಗೋಡೆ ನಿರ್ವಣಕ್ಕೆ ಮನವಿ

    ಭಟ್ಕಳ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಆಯುಕ್ತ ಮನೋಜ ರಾಜ್ ನೇತೃತ್ವದಲ್ಲಿ ಗುರುವಾರ ಇಂಟರ್ ಮಿನಿಸ್ಟ್ರಿಯಲ್ ಸೆಂಟರ್ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
    ಬುಧವಾರ ಕಾರವಾರಕ್ಕೆ ಆಗಮಿಸಿದ್ದ 10 ಜನರ ತಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಪೂರ್ಣ ಮಾಹಿತಿ ಪಡೆದು, ಭಟ್ಕಳ ತಾಲೂಕಿನಲ್ಲಿ ಹಾನಿಗೊಳಗಾದ ತಲಗೋಡ, ತೆಂಗಿನಗುಂಡಿ, ಹೆರ್ತಾರ, ಜಾಲಿ ಕಡಲತೀರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
    ಚಂಡಮಾರುತದಿಂದ ಅದ ಕಡಲ್ಕೊರೆತ, ರಸ್ತೆ ಹಾನಿ, ಮನೆಗಳ ಕುಸಿತ ಹಾಗೂ ದೋಣಿಗಳಿಗೆ ಅದ ಹಾನಿಯ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಕೇಂದ್ರ ತಂಡಕ್ಕೆ ವಿವರಣೆ ನೀಡಿದರು. ಬಂದರು ಇಲಾಖೆ ಜಿಲ್ಲೆಯಲ್ಲಿ 4.5 ಕಿ.ಮೀ ಶಾಶ್ವತ ತಡೆಗೋಡೆ ನಿರ್ವಣಕ್ಕೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಿದ್ದು, ಅದರಲ್ಲಿ ಭಟ್ಕಳವೂ ಸೇರಿದೆ. ಈ ಕುರಿತು ಕೂಡಲೆ ಅನುಮೋದನೆ ದೊರಕಿಸಿಕೊಡುವ ಕುರಿತು ಕೇಂದ್ರದ ತಂಡಕ್ಕೆ ಮನವರಿಕೆ ಮಡಲಾಯಿತು.
    ಹಾನಿಯ ಮೊತ್ತ, ರಾಜ್ಯ ಸರ್ಕಾರದಿಂದ ನೀಡಿದ ಅನುದಾನ ಹಾಗೂ ಮುಂದೆ ಅಗಬೇಕಾದ ಕೆಲಸಗಳ ಕುರಿತು ಸಂಪೂರ್ಣ ವಿವರಣೆಯನ್ನು ಕೇಂದ್ರ ತಂಡ ಪಡೆದುಕೊಂಡಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೇಂದ್ರ ತಂಡದ ಐವರು ಅಧಿಕಾರಿಗಳು, ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ, ಕುಮಟಾ ಉಪವಿಭಾಗಾಧಿಕಾರಿ ಅಜಿತ್ ಎಂ., ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ, ತಹಸೀಲ್ದಾರ್ ರವಿಚಂದ್ರ ಇತರ ಅಧಿಕಾರಿಗಳು ಇದ್ದರು.
    ಜನರ ಸಮಸ್ಯೆ ಆಲಿಸದ ತಂಡ
    ತಲಗೋಡ ಕಡಲತೀರ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡ ಕೇವಲ ಅಧಿಕಾರಿಗಳಿಂದ ವಿವರಣೆ ಪಡೆದು ತುರಾತುರಿಯಲ್ಲಿ ವಾಪಾಸು ಹೋದ ಬಗ್ಗೆ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರ ನೈಜ ಸಮಸ್ಯೆಗಳನ್ನು ಕೇಳಿ ತಿಳಿದಿಕೊಳ್ಳಬೇಕಾದ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದಿರುವುದು ಖಂಡನೀಯ. ಅಧಿಕಾರಿ ಗಳಿಂದ ವರದಿ ಪಡೆದು ಹೋಗುವುದಾದರೆ ಸ್ಥಳಕ್ಕೆ ಭೇಟಿ ನೀಡುವ ಅವಶ್ಯಕತೆ ಇತ್ತೇ? ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts