More

    ಅಡುಗೆ ಮಾಡಲು ಚಿಪ್ಪು ಕತ್ತರಿಸಿದವರಿಗೆ ಅಚ್ಚರಿ ಕಾದಿತ್ತು!!

    ಗೋಕರ್ಣ: ಅಡುಗೆ ಮಾಡಲು ಕಪ್ಪೆ ಚಿಪ್ಪು ಕತ್ತರಿಸಿದವರಿಗೆ ಅಚ್ಚರಿ ಕಾದಿತ್ತು.

    ಹೌದು, ಕೈಗೊಳ್ಳುವ ಕೆಲವು ವಿಶೇಷ ನಿರ್ಮಿತಿಗಳು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಮಾನವನ ಅರಿವಿಗೆ ಸುಲಭವಾಗಿ ತಿಳಿಯಲು ಬಾರದ, ಅನೂಹ್ಯವಾದುದು ಎಂದರೆ ತಪ್ಪಲ್ಲ.

    ಅದಕ್ಕೆ ವರ್ತಮಾನದ ಸಾಕ್ಷಿ, ತದಡಿಯ ಅಘನಾಶಿನಿ ಹಿನ್ನೀರಿನಲ್ಲಿ ಕಳೆದ ಭಾನುವಾರ ದೊರೆತ ಬಳಚು ಚಿಪ್ಪಿ ಒಳಗಡೆ ಬೆಳೆದು ಅಡಗಿ ಕುಳಿತಿದ್ದ ನೈಸರ್ಗಿಕ ಮುತ್ತು!

    ಪೌಷ್ಟಿಕ ಚಿಪ್ಪು:

    ಅಘನಾಶಿನಿಯ ಅಪಾರ ಕೊಡುಗೆಗಳಲ್ಲಿ ಬಳಚು ಚಿಪ್ಪು ಒಂದು. ಜನರಿಗೆ ಪೌಷ್ಟಿಕ ಭರಿತ ಬಹು ರುಚಿಯ ವಿಶೇಷ ಖಾದ್ಯ.

    ಬೆಲೆಯ ಮುಖ ನೋಡದೆ ಇದನ್ನು ಕೊಂಡು ತಂದು ಊಟಕ್ಕೆ ವಿಧ ವಿಧದ ಖಾದ್ಯ ತಯಾರಿಸುವುದು ಬಳಚು ಪ್ರಿಯರ ವಿಶೇಷ ಖಯಾಲಿ.

    ಬಿಳಿಯ ಬಣ್ಣದ ಚಿಪ್ಪಿಯನ್ನು ಮನೆಗೆ ತಂದು ಅದನ್ನು ಇಬ್ಭಾಗಿಸಿ ಅದರೊಳಗಿರುವ ಬಳಚು ಮಾಂಸವನ್ನು ತೆಗೆದು ಅಡುಗೆಗೆ ಬಳಸುವ ಪದ್ಧತಿ ಬಹು ಸಾಮಾನ್ಯ.


    ಚಿಪ್ಬು ಬಳಚಿನ ಜತೆಗಿತ್ತು ಮುತ್ತು!:

    ಸ್ವಾತಿ ಮಳೆಯ ಕೋಟಿ ಹನಿಗೆ ಎಲ್ಲೋ ಒಂದು ಮುತ್ತಾಗುತ್ತದೆ ಎಂಬ ಕವಿ ನುಡಿಯಿದೆ. ನೈಸರ್ಗಿಕವಾಗಿ ಮುತ್ತು ಬೆಳೆಯಲ್ಪಡುವ ಚಿಪ್ಪಿ ಸಾಮಾನ್ಯವಾಗಿ ಅಷ್ಟು ಸುಲಭವಾಗಿ ಕೈಗೆ ಸಿಗುವಂತಹದ್ದಲ್ಲ.

    ವಿಶೇಷ ಸ್ಥಳ ಮತ್ತು ಬಹು ಆಳದಲ್ಲಿ ಅವುಗಳ ಸಂತಾನ ವೃದ್ಧಿಯಾಗುತ್ತದೆ.ಅವುಗಳನ್ನು ಹುಡುಕಿ ತರುವುದು ಅತ್ಯಂತ ಕಷ್ಟ ಸಾಧ್ಯ ಕಾಯಕ.

    ಇದನ್ನೂ ಓದಿ:ಸಿನಿಮೀಯ ಶೈಲಿಯಲ್ಲಿ ಹೆರಿಗೆ ಮಾಡಲು ಮುಂದಾದ ನರ್ಸ್​; ಗರ್ಭಿಣಿ ಮೃತ್ಯು

    ಆದರೆ ಈ ಮುತ್ತು ಬೆಳೆದ ಚಿಪ್ಪಿ ತದಡಿಯ ಅಘನಾಶಿನಿ ಹಿನ್ನೀರಿನಲ್ಲಿ ಸಿಗುವ ಬಿಳಿಯ ಬಳಚು ಚಿಪ್ಪಿಯಲ್ಲಿ ಕಂಡು ಬಂದಿದೆ.

    ತದಡಿಯ ರಾಘವ ಶಂಕರ ನಾಯ್ಕ ಅವರ ಮನೆಯಲ್ಲಿ ಊಟಕ್ಕೆಂದು ತರಲಾದ ಬಳಚು ಚಿಪ್ಪಿಯನ್ನು ಒಡೆದಾಗ ಅದರೊಳಗೆ ಮಾಂಸದ ಸಂಗಡ ಮಧ್ಯಮ ಆಕಾರದ ಬಿಳಿ ಬಿಳಿ ಮುತ್ತು ಅಂಟಿ ಕುಳಿತಿರುವುದು ಪತ್ತೆಯಾಗಿದೆ.

    ನಿಸರ್ಗದ ಅತ್ಯಂತ ಅಪರೂಪದ ಈ ಚೋದ್ಯವನ್ನು ಅವರು ಮಾಧ್ಯಮದ ಮೂಲಕ ಬೆಳಕಿಗೆ ತಂದಿದ್ದಾರೆ.

    ಅಘನಾಶಿನಿ ನದಿಯ ವಿಶಾಲ ವಿಸ್ತಾರದ ಹಿನ್ನೀರಿನಲ್ಲಿ ಬಳಚು ಮಾಂಸವನ್ನು ದಯಪಾಲಿಸುವ ಬಿಳಿ ಚಿಪ್ಪಿ ಅನಾದಿಯಿಂದ ದೊರೆಯುತ್ತಿದೆ.

    ಆದರೆ ಈತನಕ ಅದರಲ್ಲಿ ಮುತ್ತು ದೊರೆತ ಉದಾಹರಣೆ ಇದೇ ಮೊದಲು ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts