More

    ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಿಸಿ, ಹಾಲು ಉತ್ಪಾದಕರ ಸಂಘ ಆಗ್ರಹ

    ಸಿಂಧನೂರು: ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಿಸಬೇಕೆಂದು ಒತ್ತಾಯಿಸಿ ತಾಲೂಕಿನ ಏಳುಮೈಲ್‌ಕ್ಯಾಂಪ್‌ನ ಹಾಲು ಉತ್ಪಾಕರ ಸಂಘದ ಕಚೇರಿ ಮುಂದೆ ಮಲ್ಲದಗುಡ್ಡ, ಅರಳಹಳ್ಳಿ, ವಿರುಪಾಪುರ, ನಾಲ್ಕುಮೈಲ್ ಕ್ಯಾಂಪ್, ಏಳುಮೈಲ್‌ಕ್ಯಾಂಪ್, ಗುಂಜಳ್ಳಿ, ತುರ್ವಿಹಾಳ, ಹೊಸಳ್ಳಿ, ಶ್ರೀನಿವಾಸ ಕ್ಯಾಂಪ್, ಹತ್ತಿಗುಡ್ಡ, ತಿಡಿಗೋಳ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

    ಕರ್ನಾಟಕ ಸರ್ಕಾರ ಹಾಲಿನ ಪಾಕೆಟ್ ದರವನ್ನು 2 ರೂ. ಹೆಚ್ಚಿಸಿತ್ತು. ಈ ಪೈಕಿ 1 ರೂ. ಅನ್ನು ಹಾಲು ಉತ್ಪಾದಿಸುವ ರೈತರಿಗೆ ನೀಡಬೇಕೆಂದು ಸರ್ಕಾರ ಎಲ್ಲ ಯೂನಿಯನ್‌ಗಳಿಗೆ ಆದೇಶ ನೀಡಿದೆ. ಆದರೆ ಬಳ್ಳಾರಿ ಯೂನಿಯನ್ ಇನ್ನೂ ರೈತರಿಗೆ 1 ರೂ. ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು. ಶೀನಿವಾಸ ಕ್ಯಾಂಪ್ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚೆನ್ನಬಸವ ದೇಸಾಯಿ, ಲಕ್ಷ್ಮಣರಾವ್, ವೀರಬಸನಗೌಡ, ನಿಂಗಪ್ಪ, ಪ್ರವೀಣಕುಮಾರ, ಪಂಪಾಪತಿ, ಪ್ರಭುಲಿಂಗಯ್ಯ, ಫಕೀರಪ್ಪ, ಸಾಯಿ, ಅಯ್ಯನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts