More

    ಮಾಸ್ಕ್ ಹಾಕ್ಕೊಳಲ್ವಾ – ಕರೊನಾ ವೈರಸ್ ಬಗ್ಗೆ ಪ್ರಬಂಧ ಬರೀರಿ: ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಧಿಸಿದ ಶಿಕ್ಷೆ ಇದು..!

    ಗ್ವಾಲಿಯರ್​: ಮಾಸ್ಕ್ ಧರಿಸದೇ ಉಡಾಫೆಯಿಂದ ಅಡ್ಡಾಡುವವರಿಗೆ ದಂಡ ವಿಧಿಸುವುದು ಒಂದು ರೀತಿಯ ಶಿಕ್ಷೆಯಾದರೆ, ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್ ವಿಧಿಸಿದ ಶಿಕ್ಷೆ ದೇಶದ ಗಮನಸೆಳೆದಿದೆ. ಕರೊನಾ ವೈರಸ್ ತಡೆಯುವುದಕ್ಕಾಗಿ ಅಲ್ಲಿನ ಜಿಲ್ಲಾಡಳಿತ ‘ರೊಕೊ ಟೊಕೊ’ ಅಭಿಯಾನ ಶುರುಮಾಡಿದೆ.

    ಇದರಂತೆ, ನಿಯಮ ಉಲ್ಲಂಘಕರನ್ನು ಬಯಲು ಬಂಧೀಖಾನೆಯಲ್ಲಿ ಬಿಡಲಾಗುತ್ತದೆ. ಅಲ್ಲಿ ಅವರು ಕರೊನಾ ವೈರಸ್ ಬಗ್ಗೆ ಪ್ರಬಂಧ ಬರೆಯಬೇಕು. ಬರೆದರಷ್ಟೇ ಅವರಿಗೆ ಬಿಡುಗಡೆ. ಹೀಗೊಂದು ದಂಡನೆ ಶನಿವಾರದಿಂದಲೇ ಆರಂಭವಾಗಿದ್ದು, ಶನಿವಾರ ಕನಿಷ್ಠ 20 ನಿಯಮ ಉಲ್ಲಂಘಕರು ಈ ಶಿಕ್ಷೆ ಅನುಭವಿಸಿದ್ದಾರೆ!

    ಇದನ್ನೂ ಓದಿ: ಪರಮಾಧಿಕಾರ ಬಳಸೋದಕ್ಕೆ ಅವಕಾಶ ಕೊಡಬೇಡಿ : ದೀದಿ ಸರ್ಕಾರಕ್ಕೆ ಗರ್ವನರ್ ವಾರ್ನಿಂಗ್​

    ಗ್ವಾಲಿಯರ್​ನಲ್ಲಿ ಅನೇಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ. ಬಹುತೇಕರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಅನೇಕರು ಫೇಸ್ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಇನ್ನೂ ಅನೇಕರು ಕತ್ತಿಗೆ ಮಾಸ್ಕ್ ಹಾಕಿಕೊಂಡು ಕಾನೂನು ಪಾಲಕರ ಕಣ್ಣೆದುರು ಮುಖಕ್ಕೇರಿಸಿಕೊಳ್ಳುತ್ತಾರೆ. ಈ ರೀತಿ ನಿಯಮ ಉಲ್ಲಂಘನೆ ತಡೆಯುವುದಕ್ಕೆ ಹೊಸ ದಂಡನೆಯ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ಡಿಸೆಂಬರ್ 8ರ ಭಾರತ್ ಬಂದ್​ ಕರೆಗೆ ಕಾಂಗ್ರೆಸ್, ಎಎಪಿ ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts