More

    ಪವಿತ್ರ ತಾಣಗಳಲ್ಲಿ ಪುಣ್ಯ ಸ್ನಾನಗೈದ ಜನ

    ಗದಗ: ಜಿಲ್ಲೆಯಲ್ಲಿ ಸೋಮವಾರ ಮಕರ ಸಂಕ್ರಮಣವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಲ್ಲಿ ಸಹಸ್ರಾರು ಜನರು ಪುಣ್ಯಸ್ನಾನ ಮಾಡಿದರು. ದೇವಸ್ಥಾನದ ಕೊಳಗಳಲ್ಲಿ ಅಭ್ಯಂಗ ಸ್ನಾನ ಮಾಡಿ ಎಳ್ಳು-ಬೆಲ್ಲ ಸವಿದರು. ಕುಟುಂಬದವರು ಪರಸ್ಪರ ಎಳ್ಳು- ಬೆಲ್ಲ ವಿನಿಮಯ ಮಾಡಿಕೊಂಡರು. ನಗರದ ಭೀಷ್ಮ ಕೆರೆ ಆವರಣ, ಬಿಂಕದಕಟ್ಟಿ ಕಿರುಮೃಗಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನ, ನಾಗಾವಿ ತಾಂಡಾ ಬಳಿರುವ ಜಲಶಂಕರ ದೇವಸ್ಥಾನ, ಕಪ್ಪತಗುಡ್ಡ ಸೇರಿದಂತೆ ನಗರದ ವಿವಿಧ ಉದ್ಯಾನಗಳಿಗೆ ಭೇಟಿ ನೀಡಿದರು. ಶೇಂಗಾ ಹೋಳಿಗೆ, ಸಜ್ಜಿ-ಬಿಳಿಜೋಳ ರೊಟ್ಟಿ, ಹಿಟ್ಟಿನಪಲ್ಯೆ, ಮೊಸರನ್ನ ಸೇರಿ ವಿವಿಧ ತಿಂಡಿ-ತಿನಿಸುಗಳನ್ನು ಸವಿದರು. ತೀರ್ಥ ಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ವೀರನಾರಾಯಣ, ತ್ರಿಕೂಟೇಶ್ವರ, ಪಂ.ಪುಟ್ಟರಾಜ ಗವಾಯಿಗಳ ಮಠ, ಅಂಬಾಭವಾನಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ತೋಂಟದಾರ್ಯ ಮಠ, ಶಿವಾನಂದಮಠ, ನಾಗಾವಿ ತಾಂಡದ ಜಲಾಶಂಕರ, ಕಪ್ಪತಗುಡ್ಡದ ಕಪ್ಪತಮಲೇಶ್ವರ ಸೇರಿ ಹನುಮಂತ ದೇವರ ದರ್ಶನ ಪಡೆದರು.

    ಜಿಲ್ಲೆಯಲ್ಲಿ ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಮಹಿಳೆಯರು ಶೇಂಗಾ ಹೋಳಿಗೆ, ರವೆ ಹುಂಡಿ, ಬೇಳೆ ಹೋಳಿಗೆ, ಎಳ್ಳಚ್ಚು ರೊಟ್ಟಿ, ಖಡಕ್ ಜೋಳದ ರೊಟ್ಟಿ, ಎಣ್ಣೆಬದನೆಕಾಯಿ ಪಲ್ಯೆ, ಶೇಂಗಾ ಚಟ್ನಿ, ಹೀಗೆ ಹತ್ತಾರು ನಮೂನೆಯ ವಿಶೇಷ ತಿನಿಸುಗಳನ್ನು ತಯಾರಿಸಿಕೊಂಡು ನದಿ ಮತ್ತು ಕೆರೆಯ ದಡದ ತೀರ್ಥ ಕ್ಷೇತ್ರಗಳಿಗೆ ಕುಟುಂಬ ಸಮೇತ ಹೋಗಿ ಸಂಭ್ರಮಿಸಿದರು.

    ವನಭೋಜನ ಸವಿದು ಸಂಭ್ರಮಿಸಿದ ಮಕ್ಕಳು

    ಮೃಗಾಲಯದಲ್ಲಿ ಕಾಡುಪ್ರಾಣಿಗಳು, ಪಕ್ಷಿಗಳನ್ನು ನೋಡಬೇಕು ಎನ್ನುವುದಕ್ಕಿಂತ ಮಕರ ಸಂಕ್ರಮಣದ ಹಬ್ಬದ ದಿನ ವಿಶೇಷ ಸವಿಯೂಟ ಮಾಡಲೆಂದೇ ಎಲ್ಲರೂ ಬಂದಿದ್ದರು. ಇದರಿಂದ ಗದಗ ಕಿರುಮೃಗಾಲಯದ ಒಳ ಆವರಣದಲ್ಲಿರುವ ವಿವಿಧ ಗಿಡ ಮರಗಳ ಕೆಳಗಡೆ ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ವನಭೋಜನ ಮಾಡುತ್ತಿರುವ ದೃಶ್ಯ ಕಂಡುಬಂದಿತು. ವನಭೋಜನ ಸವಿದ ಮಕ್ಕಳು ಮೃಗಾಲಯದಲ್ಲಿರುವ ಆಟಿಗೆ ಸಾಮಾನು ಬಳಸಿ ಆಟವಾಡಿ ಸವಿಸಮಯ ಕಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts