More

    ಕೋವಿಡ್​ ಲಾಕ್​ಡೌನ್​ ಪ್ರಭಾವ; ಭಾರತದಾದ್ಯಂತ ಜನರು ಪತ್ರಿಕೆ ಓದುವ ಅವಧಿ ಹೆಚ್ಚಾಗಿದೆಯಂತೆ…!

    ನವದೆಹಲಿ: ಕೋವಿಡ್​ 19 ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​​ ಘೋಷಿಸಲಾಗಿದೆ. ಈ ಅವಧಿಯಲ್ಲಿ ಬಹುತೇಕ ಜನರು ಮನೆಯೊಳಗೇ ಇರುವುದು ಅನಿವಾರ್ಯವಾಗಿದ್ದು, ತಾಜಾ ಸುದ್ದಿಗಾಗಿ ಪತ್ರಿಕೆಗಳನ್ನೇ ಹೆಚ್ಚಾಗಿ ಅವಲಂಬಿಸಲಾರಂಭಿಸಿದ್ದಾರೆ. ತತ್ಪರಿಣಾಮ ಜನರು ಪತ್ರಿಕೆ ಓದುವ ಅವಧಿಯಲ್ಲಿ ಭಾರಿ ಹೆಚ್ಚಳವಾಗಿದೆ.

    ಹೌದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲರೂ ಮನೆಯಲ್ಲೇ ಇರುವುದು ಅನಿವಾರ್ಯವಾಗಿದ್ದರೂ, ಅಗತ್ಯ ಸೇವೆ ವರ್ಗಕ್ಕೆ ಸೇರ್ಪಡೆಗೊಂಡಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಜನರಿಗೆ ಸುದ್ದಿ ತಲುಪಿಸುವ ಕೆಲಸವನ್ನು ನಿರಂತವಾಗಿ ಮುಂದುವರಿಸಿವೆ. ಪ್ರತಿದಿನವೂ ಬೆಳಗಿನ ವೇಳೆಗೆ ಮನೆಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವಲ್ಲಿ ಹಾಕರ್​ಗಳು ಕೂಡ ಸಹಕರಿಸುತ್ತಿದ್ದಾರೆ.

    ಇದೆಲ್ಲದರ ಪರಿಣಾಮ ಎಂಬಂತೆ ಸಾರ್ವಜನಿಕರು ಪತ್ರಿಕೆ ಓದುವ ಅವಧಿ ಒಂದು ಗಂಟೆಗೆ ಹಿಗ್ಗಿದೆ. ಅಂದರೆ ಲಾಕ್​ಡೌನ್​ಗೂ ಮುನ್ನ ಜನರು ಪತ್ರಿಕೆಗಳನ್ನು ಓದಲು 38 ನಿಮಿಷ ವ್ಯಯಿಸುತ್ತಿದ್ದರು. ಆದರೆ, ಇದೀಗ ಈ ಅವಧಿ 22 ನಿಮಿಷ ಹಿಗ್ಗಿ ಒಟ್ಟಾರೆ 1 ಗಂಟೆಗೆ ಹೆಚ್ಚಳವಾಗಿದೆ ಎಂದು ಅಡ್ವಾನ್ಸ್​ ಫೀಲ್ಡ್​ ಆ್ಯಂಡ್​ ಬ್ರ್ಯಾಂಡ್​ ಸಲ್ಯೂಷನ್ಸ್​ ನಡೆಸಿರುವ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

    ಈ ಸಮೀಕ್ಷೆಯ ಪ್ರಕಾರ ಮೊದಲು ಶೇ.16 ಜನ ಮಾತ್ರ ಒಂದು ಪತ್ರಿಕೆಯನ್ನು ಒಂದು ಗಂಟೆಯವರೆಗೆ ಓದುತ್ತಿದ್ದರು. ಇದೀಗ ಇಂಥವರ ಸಂಖ್ಯೆ ಶೇ.40ಕ್ಕೆ ಹೆಚ್ಚಳವಾಗಿದೆ. ಅಲ್ಲದೆ, ಕೇವಲ 30 ನಿಮಿಷ ಪತ್ರಿಕೆ ಓದುತ್ತಿದ್ದವರ ಶೇಕಡವಾರು ಸಂಖ್ಯೆ ಶೇ.42ರಿಂದ ಶೇ.72ಕ್ಕೆ ಹೆಚ್ಚಳವಾಗಿದೆ ಎಂದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

    ಇದೆಲ್ಲದರ ಪರಿಣಾಮ ಈ ಹಿಂದೆ ಪತ್ರಿಕೆ ಓದಲು 15 ನಿಮಿಷಕ್ಕೂ ಕಡಿಮೆ ಅವಧಿ ಮೀಸಲಿಡುತ್ತಿದ್ದವರ ಸಂಖ್ಯೆ ಇದೀಗ ಶೇ.14ರಿಂದ ಶೇ.3ಕ್ಕೆ ಇಳಿಕೆಯಾಗಿದೆ. ಶೇ.42 ಜನರು ಪತ್ರಿಕೆಗಳನ್ನು ಹಲವು ಬಾರಿ ಓದುವ ಮೂಲಕ ತಮ್ಮಿಷ್ಟದ ವಿಭಾಗಗಳಲ್ಲಿನ ಸುದ್ದಿಗಳನ್ನು ಓದಲು ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

    ಕೋವಿಡ್​ 19 ಪಿಡುಗಿನ ನಡುವೆ ಸಂತಸದ ಸುದ್ದಿ, ಇನ್ನು ಚೀನಾ ತಂಟೆ ತೆಗೆದರೆ ಅದಕ್ಕೆ ತಕ್ಕ ಶಾಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts