More

    ಜನಪ್ರತಿನಿಧಿಗಳನ್ನು ಪ್ರಶ್ನಿಸಲಾರಂಭಿಸಿದ ಸಾರ್ವಜನಿಕರು; ಇಂದು ಮತ್ತೊಬ್ಬ ಶಾಸಕರನ್ನು ತರಾಟೆಗೆ ತಗೊಂಡ ಜನರು..

    ನಂಜನಗೂಡು: ಇನ್ನು ಕೆಲಸ ಮಾಡದ ಜನಪ್ರತಿನಿಧಿಗಳಿಗೆ ಅಷ್ಟು ಸುಲಭವಿಲ್ಲ ಎಂಬ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಏಕೆಂದರೆ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಈಗ ಜನರೇ ಶಾಸಕರನ್ನು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ವಾರದ ಹಿಂದಷ್ಟೇ ಹೀಗೆ ಜನರ ಕೈಗೆ ಸಿಲುಕಿ ಶಾಸಕರೊಬ್ಬರು ಫಜೀತಿ ಪಟ್ಟಿದ್ದರು. ಇದೀಗ ಮತ್ತೊಬ್ಬ ಶಾಸಕರು ಅಂಥದ್ದೇ ಪರಿಸ್ಥಿತಿ ಎದುರಿಸುವಂತಾಗಿದೆ.

    ಹೌದು.. ಕಳೆದ ವಾರ ಇದೇ ದಿನ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕಿರಣಗಿ ಗ್ರಾಮದಲ್ಲಿನ ಜನರು ತರಾಟೆಗೆ ತೆಗೆದುಕೊಂಡಿದ್ದರು. ಇದಾಗಿ ಒಂದೇ ವಾರಕ್ಕೆ ನಂಜನಗೂಡು ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಕ್ಕೆ ಬಂದಿದ್ದ ಶಾಸಕ ಹರ್ಷವರ್ಧನ್​ ಜನರ ಪ್ರಶ್ನೆಗಳನ್ನು ಎದುರಿಸುವಂತಾಯಿತು.

    ಇದನ್ನೂ ಓದಿ: ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಹರ್ಷವರ್ಧನ್ ಆಗಮಿಸುತ್ತಿದ್ದಂತೆ ಪ್ರಶ್ನೆ ಮಾಡಿದ ಗ್ರಾಮಸ್ಥರು, ಮತಕ್ಕಾಗಿ ಬರ್ತೀರಿ.. ಗ್ರಾಮದ ಅಭಿವೃದ್ಧಿ ಮಾಡಕ್ಕಾಗಲ್ವಾ? ಶಾಲಾ ಮಕ್ಕಳು ಓಡಾಡೋದು ಹೇಗೆ? ಮಳೆ ಬಂದ್ರೆ ರಸ್ತೆಯಲ್ಲಿ ಓಡಾಡಕ್ಕಾಗಲ್ಲ. ಕುಡಿಯುವ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಏನಾದ್ರೂ ಪ್ರೋಗ್ರಾಂ ಇದ್ರೆ ಬರ್ತೀರಿ? ಎಂದು ತರಾಟೆಗೆ ತೆಗೆದುಕೊಂಡರು.

    ಗ್ರಾಮಕ್ಕೆ ಮೂಲಸೌಕರ್ಯವಿಲ್ಲ, ಹುಲ್ಲಹಳ್ಳಿ, ನಂಜನಗೂಡು ಭಾಗಕ್ಕೆ ರಸ್ತೆ ಇಲ್ಲ. ದುರಸ್ತಿ ಮಾಡ್ತೀವಿ ಅಂತೀರಿ, ಆಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ದಬಾಯಿಸಿದ ಜನರಿಗೆ, ‘ರಸ್ತೆ ಸರಿ ಮಾಡಿಸಿ ಮತಕ್ಕಾಗಿ ಬರ್ತೀನಿ’ ಅಂತ ಶಾಸಕರು ಸಮಜಾಯಿಷಿ ಕೊಟ್ಟರು.

    ಶಾಸಕರನ್ನೇ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು; ಸರ್ಕಾರದ ಬಳಿ ಹಣವಿಲ್ಲ ಎಂದ ‘ಶ್ರೀಮಂತ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts