More

    ಎದುರು ಬಂದವರ ಧರ್ಮ ಕೇಳಿ ಕೊಂದರು; ಶವಗಳನ್ನು ಚರಂಡಿಗೆಸೆದರು; ಪ್ರತ್ಯಕ್ಷದರ್ಶಿಗಳಿಂದ ಪೈಶಾಚಿಕತೆ ಅನಾವರಣ

    ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟವರು ಒಟ್ಟು 53 ಜನರು. ಪೊಲೀಸರು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    ಶಾಲೆಯ ಮುಖ್ಯಸ್ಥನೊಬ್ಬ ಎದುರಾಳಿ ಶಾಲೆಯ ಮೇಲೆ ದಾಳಿ ನಡೆಸಿದ್ದು, ತಬ್ಲಿಘಿ ಮುಖಂಡನ ಕೈವಾಡ ಹಾಗೂ ವಿವಾದಾತ್ಮಕ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್​ ಹುಸೇನ್​ ಹೆಸರೂ ಕೂಡ ಇದರಲ್ಲಿ ಕೇಳಿ ಬಂದಿತ್ತು. ಗಲಭೆಗೆ ಪ್ರತ್ಯಕ್ಷದರ್ಶಿಗಳಾಗಿದ್ದ ಹಲವರು ಪೊಲೀಸರಿಗೆ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಬಿಚ್ಚಿಟ್ಟ ಕರಾಳ ಸತ್ಯವನ್ನು ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ; ಇಸ್ಲಾಂ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ; 3 ಹಳ್ಳಿಗಳಿಗೆ ದಿಗ್ಬಂಧನ; ಸೂಪರ್​ ಸ್ಪ್ರೆಡರ್​ ಭೀತಿ

    ಫೆಬ್ರವರಿ 26ರಂದು ರಾತ್ರಿ 10.05 ನಿಮಿಷಕ್ಕೆ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ತಡೆದು ಆತನ ಬೈಕನ್ನು ಸುಟ್ಟು ಹಾಕಿದೆ ಎಂದು ಮಾಹಿತಿ ನೀಡುತ್ತಾನೆ. ನನ್ನನ್ನು ಕೊಲ್ಲಲು ಬಂದರು. ಆದರೆ, ಚರಂಡಿಗೆ ಜಿಗಿದು ಪಾರಾದೆ ಎಂದು ಆತ ಹೇಳುತ್ತಾನೆ. ಈ ಕರೆ ಮಾಡಿದ ವ್ಯಕ್ತಿಯನ್ನು ಗುರುತಿಸಿದ ಪೊಲೀಸರು ಮೂವರನ್ನು ಹತ್ಯೆ ಮಾಡಿದ ಗುಂಪನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಫೆ.24ರಂದು ಮನೆಗೆ ತೆರಳುತ್ತಿದ್ದಾಗ ಗಂಗಾ ವಿಹಾರದ ಬಳಿ ಗುಂಪೊಂದು ಎದುರಾಯಿತು. ಜೋರಾಗಿ ಬ್ರೇಕ್​ ಹಾಕಿದ್ದರಿಂದ ಬೈಕ್​ ಸ್ಕಿಡ್​ ಆಗಿ ಬಿದ್ದೆ. ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬೈಕ್​ ಅಲ್ಲಿರಲಿಲ್ಲ. ಇದನ್ನು ಪೊಲೀಸರಿಗೆ ತಿಳಿಸಲೆಂದು ಠಾಣೆಗೆ ಹೋದರೂ, ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಮರುದಿನ ಬರಲು ಹೇಳಿದರು.

    ‘ಮರುದಿನ ನಾಲ್ಕು ಗಂಟೆಗೆ ಗೋಕಲ್​ಪುರಿ ಪೊಲೀಸ್​ ಠಾಣೆಯಿಂದ ಮನೆಗೆ ಮರಳುತ್ತಿದ್ದಾಗ ಗುಂಪೊಂದು ಬರುತ್ತಿದ್ದುದನ್ನು ನೋಡಿದೆ. ಅವರೆಲ್ಲ ಹೆಲ್ಮೆಟ್​ ಧರಿಸಿದ್ದರು ಹಾಗೂ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಎದುರಿಗೆ ಬಂದವರ ಧರ್ಮವನ್ನು ಕೇಳುತ್ತಿದ್ದರು. ಮುಸ್ಲಿಮರಾಗಿದ್ದರೆ, ಕೊಂದು ಶವವನ್ನು ಚರಂಡಿಗೆ ಎಸೆಯುತ್ತಿದ್ದರು’ ಎಂದು ಹೇಳಿದ್ದಾನೆ.

    ಇದನ್ನೂ ಓದಿ; ದೆಹಲಿ ಗಲಭೆಯಲ್ಲಿ ಝಾಕೀರ್​ ನಾಯ್ಕ್​ ಕೈವಾಡ…? ಭಾರತಕ್ಕೆ ಒಪ್ಪಿಸಲು ಮಲೇಷ್ಯಾಗೆ ಒತ್ತಡ 

    ಫೆ.26 ರಂದು ರಾತ್ರಿ ಬೈಕ್​ ಹುಡುಕಲೆಂದು ಅದು ಕಳೆದು ಹೋಗಿದ್ದ ಭಾಗೀರಥಿ ವಿಹಾರದ ಚರಂಡಿ ಹೋಗಿದ್ದೆ. ಜನರ ಗುಂಪೊಂದು ಲೋನಿಯಿಂದ ಬರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿತ್ತು. ಆತ ಮುಸ್ಲಿಮನೆಂದು ತಿಳದು, ಕಲ್ಲು, ಕಬ್ಬಿಣದ ರಾಡ್​, ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಹಾಕಿತು. ಬಳಿಕ ಶವವನ್ನು ಚರಂಡಿಗೆಸೆದರು. ಇದಾದ ಮೇಲೆ ಅಪಾಚೆ ಬೈಕ್​ ಮೇಲೆ ಬಂದ ಮತ್ತಿಬ್ಬರಿಗೂ ಇದೇ ಗತಿಯಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿರುವುದಾಗಿ ಚಾರ್ಜ್​ಶಿಟ್​ನಲ್ಲಿ ಉಲ್ಲೇಖೀಸಲಾಗಿದೆ.

    ಇಷ್ಟಕ್ಕೂ ಈ ಎಲ್ಲ ಮಾಹಿತಿಯನ್ನು ನೀಡಿದ್ದು ಒಬ್ಬ ಹಿಂದು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಸಾಕ್ಷ್ಯ ಆಧರಿಸಿ ಚರಂಡಿಯಲ್ಲಿ ಪತ್ತೆಯಾದ ಶವಗಳ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಗುಂಪು ವಾಸಿಸುತ್ತಿದ್ದ ಪ್ರದೇಶದಲ್ಲಿಯೇ ಈ ಪ್ರತ್ಯಕ್ಷದರ್ಶಿ ವಾಸವಾಗಿದ್ದ. ಗುಂಪಿನಲ್ಲಿದ್ದ ಹಲವರನ್ನು ಪ್ರತ್ಯಕ್ಷದರ್ಶಿ ಗುರುತಿಸಿದ್ದಾನೆ. ಒಟ್ಟು 9 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts