More

    ಜನರ ಕಷ್ಟಕ್ಕೆ ಮಿಡಿಯುವುದೇ ಮನುಷ್ಯತ್ವ

    ಹುಕ್ಕೇರಿ: ನನ್ನನ್ನು ತಮ್ಮ ಮನೆಯ ಸದಸ್ಯರಂತೆ ಗುರುತಿಸಿ ಬೆಳೆಸಿದ ತಾಲೂಕಿನ ಜನರ ಕಷ್ಟದ ಸಮಯದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಜೀವನಾವಶ್ಯಕ ಪದಾರ್ಥ ಹೊಂದಿದ 5,250 ಕಿಟ್ ನೀಡಲಾಗುತ್ತಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

    ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ತಂದೆ, ತಾಯಿ ಸ್ಮರಣಾರ್ಥ ವಿಶ್ವರಾಜ ಶುಗರ್ ಇಂಡಸ್ಟ್ರೀಸ್ ವತಿಯಿಂದ ಬುಧವಾರ ನಿರ್ಗತಿಕರಿಗೆ ಹಾಗೂ ಕಡು ಬಡವರಿಗೆ ಹಂಚಲು ನಿರ್ಧರಿಸಿದ ಕಿಟ್‌ಗಳನ್ನು ಸಾಂಕೇತಿಕವಾಗಿ ಬಡ ಮಹಿಳೆಯರಿಗೆ ವಿತರಿಸಿ ಮಾತನಾಡಿದರು. ಕರೊನಾ ಸಾಂಕ್ರಾಮಿಕ ರೋಗ ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಪಾಲಿಸಲಾಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಉದ್ಯೋಗ ಇಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಜನರಿಗೆ ಸ್ಪಂದಿಸಬೇಕಾದದ್ದು ಕರ್ತವ್ಯ ಎಂದರು. ಲಾಕ್‌ಡೌನ್‌ನಿಂದ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ದಿನಸಿ ಪದಾರ್ಥ ವಿತರಿಸಲು ಆಗುತ್ತಿಲ್ಲ. ಆದರೂ ಇನ್ನಷ್ಟು ಪದಾರ್ಥ ಲಭ್ಯವಾದಲ್ಲಿ ಮತ್ತೆ ಹಂಚಲಾಗುವುದು ಎಂದರು.

    ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ರಮೇಶ ಕತ್ತಿ ಮತ್ತು ಉದ್ಯಮಿ ಪೃಥ್ವಿ ರಮೇಶ ಕತ್ತಿ, ಬಸವರಾಜ ಮರಡಿ, ರಾಚಯ್ಯ ಹಿರೇಮಠ, ಜಯಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಗುರುರಾಜ ಕುಲಕರ್ಣಿ, ಸತ್ಯಪ್ಪ ನಾಯಿಕ, ರಾಜೇಶ ಮುನ್ನೋಳಿ ಇತರರಿದ್ದರು.

    ವಿಶ್ವರಾಜ ಶುಗರ್ಸ್‌ ಇಂಡಸ್ಟ್ರೀಸ್‌ನಿಂದ ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಗ್ರಾಮದ ಪಿಕೆಪಿಎಸ್‌ಗಳ ಮೂಲಕ ದಿನಸಿ ಕಿಟ್ ವಿತರಿಸುತ್ತಿದ್ದೇವೆ. ಜನರು ಮನೆಯಲ್ಲಿ ಉಳಿದುಕೊಂಡು ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಹಕರಿಸಬೇಕು.
    | ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts