More

    ಶೇನ್ ವಾರ್ನ್ ಪ್ರತಿಮೆ ಎದುರು ಬಿಯರ್, ಸಿಗರೇಟ್‌ಗಳನ್ನಿಟ್ಟು ಅಭಿಮಾನಿಗಳಿಂದ ಶ್ರದ್ಧಾಂಜಲಿ!

    ಮೊಹಾಲಿ/ಮೆಲ್ಬೋರ್ನ್: ಹೃದಯಾಘಾತದಿಂದ ನಿಧನ ಹೊಂದಿದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಕ್ರಿಕೆಟ್ ಜಗತ್ತು ಶ್ರದ್ಧಾಂಜಲಿ ಸಲ್ಲಿಸಿದೆ. ಅವರ ದಿಢೀರ್ ಸಾವು ಹಾಲಿ-ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳನ್ನು ತಲ್ಲಣಗೊಳಿಸಿದೆ. ಮೊಹಾಲಿಯಲ್ಲಿ ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಆರಂಭಕ್ಕೆ ಮುನ್ನ ಉಭಯ ತಂಡಗಳ ಆಟಗಾರರು ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು. ರಾವಲ್ಪಿಂಡಿಯಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯ ಮತ್ತು ನ್ಯೂಜಿಲೆಂಡ್‌ನಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಮುನ್ನವೂ ಮೌನಾಚರಣೆಯ ಮೂಲಕ ವಾರ್ನ್‌ಗೆ ಗೌರವ ಸಲ್ಲಿಸಲಾಯಿತು. ನವದೆಹಲಿಯಲ್ಲಿ ಭಾರತ-ಡೆನ್ಮಾರ್ಕ್ ನಡುವಿನ ಡೇವಿಸ್ ಕಪ್ ಪಂದ್ಯದ ವೇಳೆಯೂ ಕ್ರೀಡಾಂಗಣದಲ್ಲಿದ್ದ ಎಲ್ಲರೂ ಮೌನ ಪ್ರಾರ್ಥನೆ ಸಲ್ಲಿಸಿ ವಾರ್ನ್‌ಗೆ ಸಂತಾಪ ಸೂಚಿಸಿದರು.

    ಶೇನ್ ವಾರ್ನ್ 700ನೇ ಟೆಸ್ಟ್ ವಿಕೆಟ್ ಕಬಳಿಸಿದ ಎಂಸಿಜಿ ಕ್ರೀಡಾಂಗಣದ ಸ್ಟಾೃಂಡ್ ಒಂದಕ್ಕೆ ಅವರ ಹೆಸರು ಇಡಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಇದೇ ಸ್ಟೇಡಿಯಂನಲ್ಲಿ ವಾರ್ನ್ ಆಶಸ್ ಸರಣಿಯ ವೇಳೆ ಹ್ಯಾಟ್ರಿಕ್ ವಿಕೆಟ್ ಕೂಡ ಕಬಳಿಸಿದ್ದರು. ಎಂಸಿಜಿ ಸ್ಟೇಡಿಯಂ ಹೊರಗೆ ಈಗಾಗಲೆ ವಾರ್ನ್ ಪ್ರತಿಮೆ ಇದೆ. ಶನಿವಾರ ಅವರ ಅಭಿಮಾನಿಗಳು ಪ್ರತಿಮೆ ಎದುರು ಹೂಗುಚ್ಛ, ಕ್ರಿಕೆಟ್ ಚೆಂಡು, ಬಿಯರ್, ಸಿಗರೇಟ್‌ಗಳನ್ನಿಟ್ಟು ಗೌರವ ಅರ್ಪಿಸಿದರು.

    ಸರ್ಕಾರಿ ಗೌರವದ ಅಂತ್ಯಕ್ರಿಯೆ
    ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ೋಷಿಸಿದ್ದಾರೆ. ವಾರ್ನ್ ಅಂತ್ಯಕ್ರಿಯೆಯನ್ನು ೆಡರಲ್ ಮತ್ತು ವಿಕ್ಟೋರಿಯಾ ಸರ್ಕಾರ ನಡೆಸಿಕೊಡಲಿದೆ. ವಾರ್ನ್ ಕುಟುಂಬ ಸದಸ್ಯರು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಾರ್ನ್ ಅವರ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಮಾರಿಸನ್ ತಿಳಿಸಿದ್ದಾರೆ.

    ಆಸ್ಪತ್ರೆಗೆ ಬರುವ ಮೊದಲೇ ಸಾವು
    ಥಾಯ್ಲೆಂಡ್‌ನ ಕೊಹ್ ಸಮುಯಿಯಲ್ಲಿರುವ ವಿಲ್ಲಾದಲ್ಲಿ ಪ್ರಜ್ಞಾಹೀನರಾಗಿದ್ದ ಶೇನ್ ವಾರ್ನ್ ಅವರನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವಾರ್ನ್‌ಗೆ 45 ನಿಮಿಷಗಳ ಕಾಲ ಸಿಪಿಆರ್ ಮಾಡಲಾಯಿತು. ಆದರೆ ಅದು ವೈದ್ಯರ ವ್ಯರ್ಥ ಪ್ರಯತ್ನವಾಗಿತ್ತು. ಯಾಕೆಂದರೆ ಆಸ್ಪತ್ರೆಗೆ ಬರುವ ಮೊದಲೇ ಅವರು ಮೃತಪಟ್ಟಿದ್ದರು ಎಂದು ಥಾಯ್ ಇಂಟರ್‌ನ್ಯಾಷನಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡುಲ್ಯಕಿಟ್ ವಿಟ್ಟಯಚನ್ಯಪೊಂಗ್ ತಿಳಿಸಿದ್ದಾರೆ. ಅನುಮಾನಾಸ್ಪದ ಹೃದಯಾಘಾತ ಎಂದು ವಾರ್ನ್ ಕುಟುಂಬ ಪ್ರಕಟಣೆಯಲ್ಲಿ ಹೇಳಿದ್ದರೂ, ಥಾಯ್ಲೆಂಡ್ ಪೊಲೀಸರು ವಾರ್ನ್ ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ ಎಂದು ಹೇಳಿದ್ದಾರೆ.

    ಸ್ನೇಹಿತರಿಂದ 20 ನಿಮಿಷ ಸಿಪಿಆರ್
    ವಾರ್ನ್ ಮೂವರು ಸ್ನೇಹಿತರೊಂದಿಗೆ ಥಾಯ್ಲೆಂಡ್‌ನ ಖಾಸಗಿ ವಿಲ್ಲಾಗೆ ವಿಶ್ರಾಂತಿಗೆ ತೆರಳಿದ್ದರು. ಅವರು ರಾತ್ರಿ ಊಟಕ್ಕೆ ಬರದಿರುವುದನ್ನು ಗಮನಿಸಿ ಸ್ನೇಹಿತರು ಅವರ ಕೋಣೆಗೆ ಹೋದಾಗ ಪ್ರಜ್ಞಾಹೀನರಾಗಿದ್ದರು. ಅದರ ಬೆನ್ನಲ್ಲೇ ಮಿತ್ರರು 20 ನಿಮಿಷಗಳ ಕಾಲ ಸಿಪಿಆರ್ ಮಾಡಿದ್ದರು. ಅದು ಪ್ರಯೋಜನವಾಗದಿದ್ದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆಗ ಬಂದ ತುರ್ತು ಚಿಕಿತ್ಸಾ ತಂಡವೂ 10-20 ನಿಮಿಷ ಸಿಪಿಆರ್ ಮಾಡಿತ್ತು. ಅದರ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

    ರವೀಂದ್ರ ಜಡೇಜಾ ಭರ್ಜರಿ ಶತಕ; ಮೊಹಾಲಿಯಲ್ಲಿ ಭಾರತ ಪ್ರಾಬಲ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts