More

    ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!

    ಗೌಹಾಟಿ : ಅಸ್ಸಾಂನ ಗೊಲಾಘಟ್​ ಜಿಲ್ಲೆಯಲ್ಲಿ ಕರೊನಾ ಲಸಿಕೆ ಪಡೆಯುಲು ಜನರು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ ಘಟನೆ ವರದಿಯಾಗಿದೆ. ವಿವಿಧ ವಯೋಮಾನದ ಜನರು ಜಿಲ್ಲೆಯ ಎರಡು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಕರೊನಾ ಮುನ್ನೆಚ್ಚರಿಕೆ ಮರೆತು ಗುಂಪು ಕಟ್ಟಿದ ಜನರ ವಿಡಿಯೋ ತುಣುಕುಗಳು ವೈರಲ್ ಆಗಿವೆ.

    ಜಿಲ್ಲಾಡಳಿತ ಆರಂಭಿಸಿರುವ ದೇರ್​ಗಾವ್​ ಕಮಲ್ ದೊಡೆರಾ ಕಾಲೇಜು ಮತ್ತು ದೇರ್​ಗಾವ್​ ಹೈಯರ್​​ ಸೆಕೆಂಡರಿ ಸ್ಕೂಲ್​ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಮೊದಲು ಪಡೆಯುವ ಹಂಬಲದಲ್ಲಿ ನಾಗರೀಕರು ನೂಕುನುಗ್ಗುಲು ನಡೆಸಿ, ತಳ್ಳಾಡಿರುವ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

    ಲಸಿಕೆ ಪಡೆಯಲು ಜನಜಂಗುಳಿ... ಪ್ರೊಟೊಕಾಲ್ ಮರೆತು ಪೈಪೋಟಿ!

    ರಾಜ್ಯದಲ್ಲಿ ಈವರೆಗೆ ಒಟ್ಟು 74,27,360 ಜನರು ಕರೊನಾ ಲಸಿಕೆ ಪಡೆದಿದ್ದಾರೆ. ಇವರಲ್ಲಿ 61,52,796 ಜನರು ಮೊದಲ ಡೋಸ್​ ಮಾತ್ರ ಪಡೆದಿದ್ದರೆ, 12,74,564 ಜನರು ಎರಡೂ ಡೋಸ್​ಗಳನ್ನು ಪಡೆದಿದ್ದಾರೆ ಎಂದು ನಿನ್ನೆ ಅಸ್ಸಾಂ ಸರ್ಕಾರ ತಿಳಿಸಿದೆ. ನಿನ್ನೆಯ ದಿನ ರಾಜ್ಯದಲ್ಲಿ 2,453 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, 27 ಸಾವು ಸಂಭವಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ಸೇನಾನಿಗಳಿಗೆ ಹೂವಿನ ಮಳೆಗರೆದು ಸನ್ಮಾನ

    ನಟ ಶಂಕರ್​ನಾಗ್​​ರ ಈ ಹಿಂದಿ ಚಿತ್ರ ನೋಡಿದ್ದೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts