More

    ಹಾಸ್ಯೋತ್ಸವದ ನಗೆಗಡಲಲ್ಲಿ ತೇಲಿದ ಜನ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಉತ್ಸವದ ಉತ್ಸಾಹವು ಮುಂಬರುವ ದಿನಗಳಲ್ಲಿ ಈ ಭಾಗವು ಪ್ರಗತಿಪಥದತ್ತ ಸಾಗಲು ಪ್ರೇರಣಾದಾಯಕವಾಗಿದೆ ಎಂದು ಕಾರ್ಮಿಕ ಶಿವರಾವ ಹೆಬ್ಬಾರ್ ಅಭಿಪ್ರಾಯಪಟ್ಟರು.
    ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಉತ್ಸವ ಅಭೂತಪೂರ್ವ ಕಾರ್ಯಕ್ರಮ. ಇದರಲ್ಲಿ ರೂವಾರಿ ಸುಧಾಕರ್ ಚಾಣಾಕ್ಷತೆ ಕಂಡು ಬರುತ್ತಿದೆ ಎಂದರು.
    ನಟ ಆಲಿ ಮಾತನಾಡಿ, ಮೊದಲಿನಿಂದಲೂ ಕರ್ನಾಟಕ ಪ್ರತಿಭಾವಂತರನ್ನು ಭೇದವಿಲ್ಲದೆ ಪ್ರೋತ್ಸಾಹಿಸುವ ಪ್ರದೇಶವಾಗಿದೆ. ಇದರಿಂದ ಈ ಭಾಗದಲ್ಲಿ ವಿಶಿಷ್ಟ ಕಲೆಗಳು ಬೆಳೆಯಲು ಸಾಧ್ಯವಾಗಿದೆ. ಇದಕ್ಕೆ ಚಿಕ್ಕಬಳ್ಳಾಪುರ ಉತ್ಸವವು ನಿದರ್ಶನವಾಗಿದೆ ಎಂದರು. ಸಚಿವ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮತ್ತಿತರರು ಇದ್ದರು.

    ಸುಧಾಕರ್‌ಗೆ ಎದುರಾಳಿಯೇ ಇಲ್ಲ
    ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಎದುರಾಳಿಯೇ ಇಲ್ಲ. ಜನಸ್ಪಂದನೆಯು ಬೆಂಬಲವಾಗಿದೆ. ಇದಕ್ಕೆ ಇಲ್ಲಿ ಅಭಿವೃದ್ಧಿ ಪರ ವಿವಿಧ ಯೋಜನೆ ಅನುಷ್ಠಾನವೇ ಕಾರಣ. ಈ ಭಾಗದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಸಂರಕ್ಷಣಾತ್ಮಕ ದಾಸ್ತಾನಿಗೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಶೀತಲ ದಾಸ್ತಾನು ಕೇಂದ್ರ ನಿರ್ಮಿಸಲಾಗುತ್ತಿದೆ. ಈಗಾಗಲೇ ಕೆಲಸವು ಪ್ರಾರಂಭವಾಗಿದೆ. ಹಿಂದೆ ಗ್ರಾಮೀಣ ರೈತರೊಂದಿಗೆ ಒಂದು ದಿನ ಸಂವಾದ ಹಮ್ಮಿಕೊಂಡು ಚರ್ಚಿಸಿದ್ದು, ಇಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಜತೆಗೆ ಪರಿಹಾರ ಕೆಲಸಗಳ ಬಗ್ಗೆ ಸಚಿವರು ಗಮನ ಸೆಳೆದಿದ್ದು, ತ್ವರಿತವಾಗಿ ಅಗತ್ಯ ನೆರವು ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ಜಬರ್‌ದಸ್ತ್ ಆದಿ ಕಲರವ
    ಖ್ಯಾತ ಹೈಪರ್ ಆದಿ ನೇತೃತ್ವದಲ್ಲಿ ಜಬರ್‌ದಸ್ತ್ ಕಾಮಿಡಿ ಶೋ ಪ್ರದರ್ಶನ ಜನರನ್ನು ನಗೆಗಡಲಿನಲ್ಲಿ ತೇಲಿಸಿತು. ಪಂಚ್ ಡೈಲಾಗ್‌ಗಳ ಮೂಲಕ ಸಹ ನಟರಾದ ರೈಸಿಂಗ್ ರಾಜು, ಶಾಂತಿ ಸ್ವರೂಪ್, ದೊರೆಬಾಬುವಿನೊಂದಿಗೆ ಕೀಟಲೆ, ಮನಮೋಹಕ ಅಭಿನಯ, ವ್ಯಂಗ್ಯ ಭರಿತ ನೃತ್ಯವನ್ನು ಟಿವಿಯಲ್ಲಿ ನೋಡಿದ್ದ ಈ ಭಾಗದ ಜನರು ನೇರವಾಗಿ ಕಾಮಿಡಿ ಶೋ ನೋಡಿ ಕಣ್ಣು ತುಂಬಿಸಿಕೊಂಡರು. ಸಚಿವ ಸುಧಾಕರ್ ಮೇಲಿನ ಪಂಚ್‌ಗೂ ಕೇಕೆ ಹಾಕಿದರು.

    ಸಿರಿಧಾನ್ಯ ರಾಶಿಗೆ ಪೂಜೆ
    ಕೃಷಿ ಮೇಳ ಮತ್ತು ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯ ರಾಶಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪೂಜೆ ಸಲ್ಲಿಸಿದರು. ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿದರು. ಕೃಷಿ ವಸ್ತು ಹಾಗೂ ಮಾಹಿತಿ ಕೇಂದ್ರ ವೀಕ್ಷಿಸಿದರು.

    ಬಾಗಿನ ವೀರಗಾಸೆ
    ಚಿಕ್ಕಬಳ್ಳಾಪುರ ಕ್ಷೇತ್ರದ ಮಂಚನಬಲೆ, ಬೊಮ್ಮನಹಳ್ಳಿ, ನಂದಿ, ಪೆರೇಸಂದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಊರ ಹಬ್ಬವನ್ನು ಆಚರಿಸಲಾಯಿತು. ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಜನರು ಸೇರಿ, ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
    ನಂತರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ವೀರಗಾಸೆ, ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭ ಮೆರವಣಿಗೆಯನ್ನು ನಡೆಸಲಾಯಿತು. ಬಳಿಕ ನಾಗರಬಾವಿ ಕೆರೆಗೆ ಬಾಗಿನ ಸಮರ್ಪಿಸಲಾಯಿತು.

    ಹಾಸ್ಯೋತ್ಸವದ ನಗೆಗಡಲಲ್ಲಿ ತೇಲಿದ ಜನ

    ಕುಸ್ತಿ ಪಂದ್ಯಾವಳಿಗಳಲ್ಲಿ ಪೈಪೋಟಿ
    ದೇಶಿ ಕುಸ್ತಿ ಪಂದ್ಯಾವಳಿಗಳು ಭಾರತದ ವಿಶಿಷ್ಟ ಕಲೆಯ ಸಂಕೇತ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ಚಿಕ್ಕಬಳ್ಳಾಪುರ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿದೆ. ಇದರಲ್ಲಿ ಕುಸ್ತಿ ಪಂದ್ಯಾವಳಿ
    ಒಂದು. ಇಂತಹ ಸ್ಪರ್ಧೆಗಳು ಕುಸ್ತಿಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಹಕಾರಿಯಾಗಿದೆ ಎಂದರು. ಉತ್ತಮ ಪ್ರದರ್ಶನ ತೋರಿಸಿ, ಗೆಲುವು ಸಾಧಿಸಿದ ಕುಸ್ತಿಪಟುಗಳನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್ರೆಡ್ಡಿ ಬಾಬು, ಮಾಜಿ ಅಧ್ಯಕ್ಷ ಎಂ.ಮುನಿಕೃಷ್ಣ, ಸದಸ್ಯರಾದ ಗಜೇಂದ್ರ, ಸತೀಶ್, ವಾರ್ತಾ ಸಹಾಯಕ ಮಂಜುನಾಥ್ ಮತ್ತಿತರರು ಇದ್ದರು.

    ಕಲಾವಿದರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಕಲೆಯ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆಗಳನ್ನು ಒದಗಿಸಬೇಕು.

    ಡಾಲಿ ಧನುಂಜಯ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts