More

    ಮೃತಪಟ್ಟವರ ಹೆಸರಲ್ಲೂ ಪಿಂಚಣಿ!, ಲೋಕಲ್ ಫಂಡ್ ಆಡಿಟ್ ವಿಭಾಗದಿಂದ ಪತ್ತೆ

    ಕಾಸರಗೋಡು: ಜಿಲ್ಲೆಯಲ್ಲಿ ಮೃತಪಟ್ಟಿರುವವರ ಹೆಸರಲ್ಲಿ ಸಾಮಾಜಿಕ ಸುರಕ್ಷಾ ಪಿಂಚಣಿಯ ಲಕ್ಷಾಂತರ ರೂ. ಮೊತ್ತವನ್ನು ಅವರ ಆಶ್ರಿತರು ಪಡೆದುಕೊಂಡಿರುವುದನ್ನು ರಾಜ್ಯ ಲೋಕಲ್ ಫಂಡ್ ಆಡಿಟ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

    ಕಾಸರಗೋಡು ಜಿಲ್ಲೆಯ 15 ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ವಿತರಿಸಿರುವುದನ್ನು ಆಡಿಟಿಂಗ್ ವಿಭಾಗ ಪತ್ತೆ ಹಚ್ಚಿದೆ. ಪೈವಳಿಕೆ, ಮಂಗಲ್ಪಾಡಿ, ಪುತ್ತಿಗೆ, ಕಾರಡ್ಕ, ಮಧೂರು, ಪಳ್ಳಿಕೆರೆ, ಮೊಗ್ರಾಲ್‌ಪುತ್ತೂರ್, ಚೆಂಗಳ ಸೇರಿದಂತೆ ಜಿಲ್ಲೆಯ 15 ಪಂಚಾಯಿತಿಗಳಲ್ಲಿ ಈ ಲೋಪ ಪತ್ತೆ ಹಚ್ಚಲಾಗಿದೆ. ಪೈವಳಿಕೆ ಪಂಚಾಯಿತಿಯ 62 ಮಂದಿ 6.37 ಲಕ್ಷ ರೂ., ಪುತ್ತಿಗೆ ಪಂಚಾಯಿತಿಯ 13 ಮಂದಿ 2.18 ಲಕ್ಷ ರೂ, ಮಂಗಲ್ಪಾಡಿ ಪಂಚಾಯಿತಿಯಲ್ಲಿ ಒಬ್ಬರ ಹೆಸರಲ್ಲಿ 30,160 ರೂ, ಕಾರಡ್ಕದ 26 ಮಂದಿಯ 4.36 ಲಕ್ಷ ರೂ., ಮಧೂರು ಪಂಚಾಯಿತಿಯ 8 ಮಂದಿ 1.68 ಲಕ್ಷ ರೂ., ಚೆಂಗಳ ಪಂಚಾಯಿತಿಯ 20 ಮಂದಿ 77300 ರೂ., ಪಳ್ಳಿಕೆರೆಯ 37 ಮಂದಿ 3.60 ಲಕ್ಷ ರೂ. ಪಡೆದಿದ್ದಾರೆ. 2019ರಿಂದ 2021ರ ಅವಧಿಯಲ್ಲಿ ಈ ಮೊತ್ತ ಪಡೆದುಕೊಳ್ಳಲಾಗಿದೆ ಎಂದೂ ಆಡಿಟ್ ಲೆಕ್ಕಾಚಾರ ತಿಳಿಸಿದೆ.

    ಮೃತಪಟ್ಟವರ ಹೆಸರಲ್ಲಿ ಅವರ ಆಶ್ರಿತರಿಗೆ ಸಾಮಾಜಿಕ ಪಿಂಚಣಿ ಹಣ ರವಾನೆಯಾಗುತ್ತಿರುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಕಾರ್ಯದರ್ಶಿ ಅಥವಾ ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯ ಕರ್ತವ್ಯ ಲೋಪ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts