More

    ಜಿಡಿಎಸ್ ನೌಕರರಿಗೆ ವಿಶೇಷ ಭತ್ಯೆ ನೀಡಿ

    ಹರಪನಹಳ್ಳಿ: ಪಿಂಚಣಿ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ನಾಲ್ಕನೇ ದಿನ ಪೂರೈಸಿತು.

    ಇದನ್ನೂ ಓದಿ: ತೋಟದಲ್ಲಿಯೇ ಅಡಕೆ ಗೊನೆ ಕದ್ದವರ ಬಂಧನ

    ನೌಕರರ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12, 24 ಮತ್ತು 36 ವರ್ಷಗಳ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು. ಗ್ರಾಚ್ಯುಟಿ ಮೇಲಿನ ಗರಿಷ್ಠ ಮೊತ್ತವಾದ 1.5 ಲಕ್ಷ ರೂ.ಗಳ ಮಿತಿಯನ್ನು ತೆಗೆದು ಹಾಕಿ, ಕಮಲೇಶ ಚಂದ್ರ ಸಮಿತಿ ಶಿಫಾರಸ್ಸಿನಂತೆ ಗರಿಷ್ಠ 5 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದರು.

    ಪಿಂಚಣಿ ಸೌಲಭ್ಯ ಒದಗಿಸಿ

    ಜಿಡಿಎಸ್ ನೌಕರರಿಗೆ ಹಾಗೂ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು. 30 ದಿನಗಳ ವೇತನ ಸಹಿತ ರಜೆ ನೀಡಬೇಕು ಮತ್ತು 7ನೇ ವೇತನದ ಶಿಫಾರಸ್ಸಿನಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ಒದಗಿಸಬೇಕು ಆಗ್ರಹಿಸಿದರು.
    ಪದಾಧಿಕಾರಿಗಳಾದ ಸಿ.ಎಲ್.ಭಟ್ಟರು, ಮಂಜಪ್ಪ ಬಣಕಾರ, ಮಹಾಲಿಂಗಪ್ಪ ಹುಲಿಕಟ್ಟಿ, ಅಧಿಕಾರ ಮಂಜುನಾಥ್, ರುದ್ರೇಶ ಮೇಗಳಗೇರಿ, ನಿಂಗಪ್ಪ ತಾವರಗೊಂದಿ, ಕರಿಯಪ್ಪ ಕೆರೆಗುಡಿಹಳ್ಳಿ, ಮಂಜುನಾಥ ರಫೀಕ್ ಅಹ್ಮದ್, ತಿಕ್ಯಾನಾಯ್ಕಾ, ಲಕ್ಷ್ಮಣ್‌ನಾಯ್ಕ, ದುರುಗಪ್ಪ, ಅವೀನಾ ಯಾದವ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts