More

    ಕಾವೇರಿ ನೀರು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದರೆ ಕಠಿಣ ಕ್ರಮ; ಬೆಂಗಳೂರು ಜಲಮಂಡಳಿಯಿಂದ ಎಚ್ಚರಿಕೆ

    ಬೆಂಗಳೂರು: ಜಲಮಂಡಲಿಯ ಎಚ್ಚರಿಕೆಯ ನಡುವೆಯೂ ಹೋಳಿ ಹಬ್ಬದ ಅಂಗವಾಗಿ ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದ್ದರೆ ಅಂತಹ ಸಂಸ್ಥೆಗಳಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

    ಹೋಳಿ ಹಬ್ಬ ನಮ್ಮ ಧಾರ್ಮಿಕ ಹಾಗು ಸಾಂಸ್ಕೃತಿಕ ಹಬ್ಬವಾಗಿದ್ದು, ಹಬ್ಬ ಆಚರಿಸುವುದು ತಪ್ಪಲ್ಲ. ಬದಲಿಗೆ ಹಬ್ಬವನ್ನು ವಾಣಿಜ್ಯೀಕರಣ ಮಾಡಿ, ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸಿ ನೀರು ಪೋಲು ಮಾಡುವುದು ಸರಿಯಲ್ಲ. ಎರಡು ಹೋಟೆಲ್​ನವರು ರೈನ್ ಡ್ಯಾನ್ಸ್ ಆಯೋಜನೆಗೆ ಸಿದ್ಧತೆ ನಡೆಸಿದರೂ ನಮ್ಮ ಅಧಿಕಾರಿಗಳು ಭೇಟಿ ನೀಡಿದ ಬಳಿಕ ರೈನ್ ಡ್ಯಾನ್ಸ್ ಆಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದರು.

    22 ಕೇಸ್ ದಾಖಲು

    ನೀರಿನ ಅಭಾವದ ನಡುವೆಯೂ ಕಾರು ಸೇರಿದಂತೆ ಇನ್ನಿತರ ವಾಹನಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಕುಡಿಯುವ ನೀರು ಬಳಸಿದ ಸಂಬಂಧ ಇದುವರೆಗೂ 22 ದೂರು ದಾಖಲಾಗಿದ್ದು, 1.10 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

    ಆಗ್ನೇಯ ಭಾಗದಲ್ಲಿ ಅತಿಹೆಚ್ಚು ದೂರುಗಳು ಕೇಳಿ ಬರುತ್ತಿದ್ದು, ದೂರು ದಾಖಲಿಸುವುದರ ಜತೆಗೆ ಮಿತವಾಗಿ ನೀರು ಬಳಸುವಂತೆ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts