More

    ಪತ್ನಿ ಫೋಟೋಗೆ ನಿಂದನಾತ್ಮಕ ಕಾಮೆಂಟ್​ ಮಾಡಿ ದಂಡ ತೆತ್ತ ಪತಿರಾಯ

    ಅಹಮದಾಬಾದ್: ಸಾಮಾಜಿಕ ಜಾಲತಾಣದಲ್ಲಿ ಪತ್ನಿಗೆ ಸಂಬಂಧಿಸಿದಂತೆ ನಿಂದನಾತ್ಮಕ ವಿಷಯವನ್ನು ಅಪ್​​ಲೋಡ್ ಮಾಡಿದ ಪತಿರಾಯನೊಬ್ಬ ದಂಡ ತೆರಬೇಕಾಗಿದೆ.
    ಪತ್ನಿ ಮಾನಸಿಕ ಕಿರುಕುಳ ಎದುರಿಸುತ್ತಿದ್ದುದರಿಂದ ಸ್ಥಳೀಯ ಕೋರ್ಟ್ ಈ ಕುರಿತು ಆದೇಶಿಸಿದೆ.
    ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದನೆಂದು ಆರೋಪಿಸಲಾಗಿದ್ದು, ಆಕೆ ಪೊಲೀಸರನ್ನು ಸಂಪರ್ಕಿಸಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. 2016 ರಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ : ರಿಯಾ ಚಕ್ರವರ್ತಿಯೆಂದೇ ನಿಂದಿಸಿದ ಕಾಲರ್​​ಗಳು… ಇದರ ಅಸಲಿಯತ್ತೇನು?

    ಮಹಿಳೆಯ ಹಕ್ಕುಗಳನ್ನು ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಅಂಗೀಕರಿಸಿತು ಮತ್ತು 2019 ರ ಏಪ್ರಿಲ್‌ನಲ್ಲಿ ಆಕೆಗೆ ಮಾಸಿಕ ನಿರ್ವಹಣೆಗೆ 4,000 ರೂ. ನೀಡಬೇಕೆಂದೂ, ಅಷ್ಟೇ ಅಲ್ಲದೆ, ಮಹಿಳೆಗೆ ಕಾನೂನು ವೆಚ್ಚವಾಗಿ 1,000 ರೂ. ನೀಡಬೇಕೆಂದು ಆಕೆಯ ಗಂಡನಿಗೆ ತಿಳಿಸಲಾಗಿತ್ತು.
    ಆದರೆ ಮಹಿಳೆ ನಿರ್ವಹಣೆ ಮೊತ್ತ ಕಡಿಮೆಯಾಗಿರುವುದರಿಂದ ನ್ಯಾಯಾಲಯದ ಆದೇಶದಿಂದ ತೃಪ್ತಿ ಗೊಂಡಿರಲಿಲ್ಲ. ತನ್ನ ಸೋಷಿಯಲ್ ಮೀಡಿಯಾ ಫೋಟೋಗಳಿಗೆ ಪೋಸ್ಟ್ ಮಾಡಿದ ನಿಂದನೀಯ ಕಾಮೆಂಟ್‌ಗಳಿಗಾಗಿ ಗಂಡ ಪರಿಹಾರವನ್ನು ನೀಡುವಂತೆ ನ್ಯಾಯಾಲಯವನ್ನು ಕೇಳಲು ಬಯಸಿದ್ದಳು.

    ಇದನ್ನೂ ಓದಿ :  ಬಿಇ ಪದವೀಧರರಿಗೆ ಬಿಇಎಲ್​ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗುವ ಅವಕಾಶ

    ತನ್ನ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಆಕೆ ನಗರ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಳು. ತನ್ನ ಮೇಲ್ಮನವಿಯಲ್ಲಿ, ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ತನ್ನ ಪತಿ ಮಾಡಿದ ಅಶ್ಲೀಲ ಸಾಮಾಜಿಕ ಮಾಧ್ಯಮ ಕಾಮೆಂಟ್​​ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮಹಿಳೆ ಉಲ್ಲೇಖಿಸಿದ್ದಳು.
    ಕೂಲಂಕಷ ಪರಿಶೀಲನೆಯ ನಂತರ, ಮಹಿಳೆಯ ಪತಿ ಫೇಸ್​​​ಬುಕ್ ಮತ್ತು ಇನ್​​​ಸ್ಟಾಗ್ರಾಮ್ ಫೋಟೊಗಳಿಗೆ ಕಾಮೆಂಟ್​​ಗಳನ್ನು ಪೋಸ್ಟ್ ಮಾಡಿರುವುದಾಗಿ ಒಪ್ಪಿಕೊಂಡ. ಕಳೆದ ವಾರ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಶರ್ಮಾ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸೆಕ್ಷನ್ 22 ರ ಅಡಿ ಪರಿಹಾರವನ್ನು ಪಾವತಿಸುವಂತೆ ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಆಕೆಯ ಪತಿಗೆ ಕೇಳಬೇಕಾಗಿತ್ತು ಎಂಬುದನ್ನು ಗಮನಿಸಿದರು.

    ಇದನ್ನು ಓದಿ:  ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೋದಿ ಸಜ್ಜು; ಭೌತಿಕ ತರಗತಿಗಳೇ ಇರಲ್ಲ, ಆನ್​ಲೈನ್​ ಕ್ಲಾಸ್​ಗಳೇ ಎಲ್ಲ….!

    “ದೂರು ನೀಡಿದ ಹೆಂಡತಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​​ಗಳಿಗೆ ನಿಂದನೀಯ ಕಾಮೆಂಟ್​​​ಗಳ ಬಗ್ಗೆ ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಾಧೀಶರು ಗಮನಿಸಿದರು. ಇದು ಯಾವುದೇ ವ್ಯಕ್ತಿಗಾಗಲಿ ಮಾನಸಿಕ ಹಿಂಸೆಯೇ. ಆದ್ದರಿಂದ ಇದು ಕೌಟುಂಬಿಕ ಹಿಂಸಾಚಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂಬುದನ್ನು ಆತ ಒಪ್ಪಿಕೊಂಡಿರುವುದಾಗಿ ನಿರ್ಧರಿಸಲಾಯಿತು.
    ಇಷ್ಟೆಲ್ಲ ಆಗಿ ಶೇ 6 ರಷ್ಟು ಬಡ್ಡಿಯೊಂದಿಗೆ ಒಂದು ತಿಂಗಳೊಳಗೆ 15 ಸಾವಿರ ರೂ. ಪರಿಹಾರ, ಆಕೆಗೆ ಮನೆ ಬಾಡಿಗೆಗೆ 2,000 ರೂ. ನೀಡಬೇಕೆಂದು ಆತನಿಗೆ ತಿಳಿಸಿದೆ ಅಷ್ಟೇ ಅಲ್ಲದೆ . ನ್ಯಾಯಾಲಯವು ಕಾನೂನು ವೆಚ್ಚದ ಮೊತ್ತವನ್ನು 1,000 ರೂಗಳಿಂದ 3,000 ರೂಗಳಿಗೆ ಹೆಚ್ಚಿಸಿದೆ.

    ಕಳೆದ ವರ್ಷದ ಇದೇ ಸಮಯ ನೆನೆದು ದುಃಖಿಸಿದ ಪ್ರಣಬ್‌ ಮುಖರ್ಜಿ ಪುತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts