More

    ಕನ್ನಡಿಗರನ್ನು ಕೆಣಕಿದ ಮಹಾರಾಷ್ಟ್ರ ಪುಂಡರಿಗೆ ಲಾಠಿಏಟು!

    ಬೆಳಗಾವಿ: ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಪ್ರತಿಷ್ಠಾಪಿಸಿದ್ದನ್ನು ವಿರೋಧಿಸಿ ಬೀದಿಗಿಳಿದ ಮಹಾರಾಷ್ಟ್ರ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ನಮಗೂ ಶಿವಾಜಿ ಮೂರ್ತಿ ಸ್ಥಾಪಿಸಲು ಅವಕಾಶ ಮಾಡಿ ಕೊಡಿ ಎಂದು ಕ್ಯಾತೆ ತೆಗೆಯುತ್ತ ಸ್ಥಳದಲ್ಲಿ ನೂರಾರು ಮರಾಠಿ ಯುವಕರು ಜಮಾಯಿಸಿದ್ದರು. ರಾಯಣ್ಣರ ಪ್ರತಿಮೆ ನಿರ್ಮಿಸಿದ್ದಕ್ಕೆ ಸ್ಥಳೀಯ ಮರಾಠಿಗರೂ ವಿರೋಧಿಸುತ್ತ ಘೋಷಣೆ ಕೂಗುತ್ತಿದ್ದರು. ರಾಯಣ್ಣ ಪ್ರತಿಮೆ ಬಳಿ ಕನ್ನಡ ಹೋರಾಟಗಾರರೂ ಸೇರಿದ್ದರು. ಈ ವೇಳೆ ಎರಡೂ ಗುಂಪಿನ ನಡುವೆ ವಾಗ್ದಾದ ನಡೆಯಿತು. ಇದೇ ವೇಳೆ ಮರಾಠಿ ಯುವಕರು ಗುಂಪುಕಟ್ಟಿಕೊಂಡು ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ ಪೊಲೀಸರು ಗುಂಪುಗಳನ್ನು ಚದುರಿಸಿದರು.

    ಇದನ್ನೂ ಓದಿರಿ ಪದವಿ ಕಾಲೇಜು ತರಗತಿಗಳ ಆರಂಭಕ್ಕೆ ಡೇಟ್​ಫಿಕ್ಸ್, ಇಲ್ಲಿದೆ ಡಿಟೇಲ್ಸ್

    ಪೀರನವಾಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಸ್ಥಳದಲ್ಲಿ ಪೊಲೀಸ್​ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಳಗಾವಿ ಕಮಿಷನರ್ ತ್ಯಾಗರಾಜನ್ ಭೇಟಿ ನೀಡಿದ್ದಾರೆ. ನಿಮ್ಮ ಬೇಡಿಕೆ ಏನೇ ಇದ್ದರೂ ಕಮಿಷನರ್ ಮತ್ತು ಜಿಲ್ಲಾಧಿಕಾರಿಗೆ ಕೇವಲ 5 ಜನರು ಮಾತ್ರ ಬಂದು ಮನವಿ ಸಲ್ಲಿಸಿ. ಇಷ್ಟು ಜನರು ಗುಂಪು ಸೇರುವ ಅವಶ್ಯಕತೆ ಇಲ್ಲ. ಶಾಂತವಾಗಿರಿ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts