More

    ಶೇಂಗಾ ಬೆಲೆ ಕುಸಿತ ಆತಂಕದಲ್ಲಿ ರೈತರು

    ಅಜ್ಜಂಪುರ: ತಾಲೂಕಿನಲ್ಲಿ ಈ ಬಾರಿ ಶೇಂಗಾ ಬೆಳೆ ಉತ್ತಮವಾಗಿ ಬೆಳೆದಿದೆ. ಆದರೆ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದರಿಂದ ಅನ್ನದಾತ ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.

    ಒಂದು ಎಕರೆ ಶೇಂಗಾ ಬೆಳೆಯಲು ಪ್ರತಿ ಕ್ವಿಂಟಾಲ್​ಗೆ 6 ಸಾವಿರ ರೂ. ಬಿತ್ತನೆ ಬೀಜ ರೈತರ ಕೂಲಿ, ಬೇಸಾಯ, ಕಟಾವು ಸೇರಿ ಎಕರೆಗೆ 40 ಸಾವಿರ ರೂ. ಗೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಆದರೆ ಇಂದು ಕ್ವಿಂಟಾಲ್ ಶೇಂಗಾವನ್ನು 3 ಸಾವಿರ ರೂ. ಗೂ ಕೇಳುವವರಿಲ್ಲ. ಪ್ರತಿ ಎಕರೆಗೆ 6-7 ಕ್ವಿಂಟಾಲ್ ಬೆಳೆ ಬಂದಿದೆ. ಸದ್ಯ ಖರ್ಚು ಮಾಡಿದ ಹಣವೂ ಕೈ ಸೇರುತ್ತಿಲ್ಲ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ಕಳೆದ ಬಾರಿ ಈ ವೇಳೆ ಪ್ರತಿ ಕ್ವಿಂಟಾಲ್ ಶೇಂಗಾ ಬೆಳೆಗೆ 7-8 ಸಾವಿರ ಬೆಲೆ ಇತ್ತು. ಈ ಬಾರಿ ಕರೊನಾ ಭೀತಿಯಿಂದ ವಹಿವಾಟಿನ ತೊಂದರೆ ಹಾಗೂ ಕಳೆದ ಬಾರಿಗಿಂತ ಶೇ. 25ರಷ್ಟು ಬೆಳೆ ಕುಸಿತವಾಗಿರುವುದು ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ.

    ತಾಲೂಕಿನಲ್ಲಿ 50 ರಷ್ಟು ಬೆಳೆ ಕಟಾವು ಮಾಡಲಾಗಿದೆ. ಇನ್ನೂ ಬೆಳೆದ ಬೆಳೆಯನ್ನು ಸಂರಕ್ಷಿಸಲು ಯಾವುದೇ ಗೋದಾಮಿನ ವ್ಯವಸ್ಥೆ ಇಲ್ಲ. ಸರ್ಕಾರ ಭರವಸೆ ನೀಡುವುದರಲ್ಲಿ ಕಾಲ ಕಳೆಯುತ್ತಿದೆ. ರೈತರು ಅನಿವಾರ್ಯವಾಗಿ ಬೆಳೆ ಸಂಗ್ರಹಿಸಲು ಸಾಧ್ಯವಾಗದೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವಂತಾಗಿದೆ.

    ತಾಲೂಕಿನಲ್ಲಿ ಒಟ್ಟೂ 6500 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಈ ಬಾರಿ ಬೆಳೆ ಪ್ರಮಾಣ ಹೆಚ್ಚಾಗಿದೆ. ಅಕಾಲಿಕ ಮಳೆಯಿಂದ ಶೇ.10 ರಷ್ಟು ಇಳುವರಿ ಕಡಿಮೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts