More

    ಶೇಂಗಾ ಬೆಲೆ ದೀಢೀರ್ ಕುಸಿತ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು

    ಕೊಟ್ಟೂರು: ಶೇಂಗಾ ಬೆಲೆ ಕುಸಿತ ವಿರೋಧಿಸಿ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿಗೆ ರೈತರು ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ವಾರದ ಹಿಂದೆ ಇದೇ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಶೇಂಗಾಗೆ ಐದು ಸಾವಿರದ ಐದು ನೂರು ರೂ.ಗೆ ಮಾರಾಟ ಮಾರಾಟವಾಗಿದ್ದು, ಈ ವಾರ ಮೂರು ಸಾವಿರದ ಐದು ನೂರುಗೆ ಟೆಂಡರ್ ಆಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ನೂರಾರು ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಶೇಂಗಾ ಬೆಲೆ ಇದ್ದಕ್ಕಿದಂತೆ ಕುಸಿಯಲು ಕಾರಣವೇನೆಂದು ಕಾರ್ಯದರ್ಶಿ ವೆಂಕಟೇಶರನ್ನು ಪ್ರಶ್ನಿಸಿದರು.

    ರಾಜ್ಯದ ಬೇರೆ ಬೇರೆ ಮಾರುಕಟ್ಟೆಯ ಶೇಂಗಾ ಬೆಲೆ ಪಟ್ಟಿಯನ್ನು ಕಾರ್ಯದರ್ಶಿ ಪ್ರದರ್ಶಿಸಿದರು. ರೈತ ತೇಜನಾಯ್ಕ, ಮುಂಡರಗಿ ಮಾರುಕಟ್ಟೆಯ ಶೇಂಗಾ ಬೆಲೆ ಪಟ್ಟಿ ತೋರಿಸಿ ಎಂದು ಪಟ್ಟು ಹಿಡಿದರು. ಮಾರುಕಟ್ಟೆ ದಲ್ಲಾಳಿಗಳು ಮತ್ತು ಖರೀದಿದಾರರು ಒಂದಾಗಿ ರೈತರನ್ನು ವಂಚಿಸಲು ಶೇಂಗಾ ಬೆಲೆಯನ್ನು ಕಡಿಮೆ ಮಾಡಿದ್ದೀರಿ ಎಂದು ರೈತರು ಆರೋಪಿಸಿದರು. ಈ ಸಂದರ್ಭ ಮಾತನ ಚಕಿಮಕಿ ನಡೆಯಿತು. ಬಳಿಕ ಎಎಸ್‌ಐ ವಸಂತ ರಾವ್ ಮತ್ತು ಸಿಬ್ಬಂದಿ ರೈತರನ್ನು ಸಮಾಧಾನಪಡಿಸಿದರು.

    ತಕ್ಷಣ ಎಪಿಎಂಸಿ ಸಿಬ್ಬಂದಿ ಕಚೇರಿಗೆ ಬೀಗಹಾಕಿ ಹೋದರು. ಇದು ರೈತರಲ್ಲಿ ಮತ್ತಷ್ಟು ಸಿಟ್ಟಿಗೆ ಕಾರಣವಾಯಿತು. ಕಡಿಮೆ ಬೆಲೆಗೆ ಶೇಂಗಾ ಟೆಂಡರ್ ಹಾಕಿರುವುದರಿಂದ ಶೇಂಗಾ ಮಾರುವುದಿಲ್ಲ ಎಂದು ರೈತರು ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts