More

  ರೈತ ಉತ್ಪಾದಕರ ಸಂಸ್ಥೆಗಳ ಬಾಕಿ ಹಣ ಪಾವತಿಸಿ

  ರಾಯಚೂರು: ರೈತ ಉತ್ಪಾದಕರ ಸಂಸ್ಥೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗ ಬೇಕಾದ ಬಾಕಿ ಹಣವನ್ನು ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
  ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
  ರೈತರಿಗೋಸ್ಕರ ರಚನೆಗೊಂಡ ರೈತ ಉತ್ಪಾದಕ ಸಂಸ್ಥೆಗಳು ಕೃಷಿ ಸಂಬಂಸಿದ ಚಟುವಟಿಕೆಗಳಾದ ಸಂಸ್ಕರಣೆ, ವೌಲ್ಯವರ್ಧನೆ, ಸಂಗ್ರಹಣೆ, ಮಾರಾಟ, ಹಣಕಾಸಿನ ಸೇವೆ, ಪರಿಕರಗಳ ಪೂರೈಕೆ, ಬಿತ್ತನೆ ಬೀಜ ಉತ್ಪಾದನೆಗಳನ್ನು ಮಾಡುತ್ತವೆ.
  2015-16 ರಿಂದ ಇಲ್ಲಿಯವರೆಗೆ ನಾಬಾರ್ಡ್ ಪ್ರಾಯೋಜಿತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 710 ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭವಾಗಿದ್ದು, ಅಂದಾಜು 200 ಕೋಟಿ ರೂ. ಅನುದಾನದಲ್ಲಿ 182 ಕೋಟಿ ರೂ. ಬಿಡುಗಡೆಯಾಗಿದೆ.
  ಇದುವರೆಗೂ ಶೇ.12ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದ್ದು, ಶೇ.82ರಷ್ಟು ಅನುದಾನ ಬಿಡುಗಡೆಯಾಗಬೇಕಾಗಿದೆ. ಇದರಿಂದ 10 ಲಕ್ಷ ರೈತರಿಗೆ, 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಯಾಗಿದೆ. ಕೂಡಲೇ ಬಾಕಿ ನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
  ಪ್ರತಿಭಟನೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ, ಪದಾಕಾರಿಗಳಾದ ಬಸವರಾಜ, ವೆಂಕಟೇಶ, ವಿಷ್ಣುವರ್ಧನರೆಡ್ಡಿ, ಪ್ರಕಾಶ, ಮಲ್ಲಿಕಾರ್ಜುನ, ಶಿವಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts